alex Certify
ಕನ್ನಡ ದುನಿಯಾ       Mobile App
       

Kannada Duniya

ಏರಿಕೆಯಾಯ್ತು ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆ

gas-lpg-s

ನವದೆಹಲಿ: ತೈಲ ಮಾರಾಟ ಕಂಪನಿಗಳು ಇಂಧನ ಬೆಲೆಯನ್ನು ಪರಿಷ್ಕರಿಸಿದ್ದು, ಕಳೆದ 2 ತಿಂಗಳಿಂದ ಏರುಗತಿಯಲ್ಲಿದ್ದ ಏವಿಯೇಷನ್ ಟರ್ಬೈನ್ ಫ್ಯುಯೆಲ್(ವಿಮಾನ ಇಂಧನ) ಬೆಲೆಯನ್ನು ಶೇ. 5.1 ರಷ್ಟು ಇಳಿಕೆ ಮಾಡಲಾಗಿದೆ.

ಸಬ್ಸಿಡಿ ರಹಿತ ಅಡುಗೆ ಅನಿಲ ಪ್ರತಿ ಸಿಲಿಂಡರ್ ಗೆ 14.50 ರೂಪಾಯಿ ಕಡಿಮೆಯಾಗಿದೆ. ಆದರೆ, ಸಬ್ಸಿಡಿ ಗೃಹಬಳಕೆ ಅಡುಗೆ ಅನಿಲದ ಬೆಲೆ ಪ್ರತಿ ಸಿಲಿಂಡರ್ ಗೆ 5.57 ರೂ ಏರಿಕೆ ಮಾಡಲಾಗಿದೆ.

14.2 ಕೆ.ಜಿ. ತೂಕದ ಗೃಹಬಳಕೆಯ ಪ್ರತಿ ಸಿಲಿಂಡರ್ ಬೆಲೆಯನ್ನು 440.50 ರೂ.ಗೆ ಏರಿಕೆ ಮಾಡಲಾಗಿದೆ. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 737.50 ರೂ.ನಿಂದ 723 ರೂ.ಗೆ ಇಳಿಸಲಾಗಿದೆ.

ವಿಮಾನ ಇಂಧನ ಬೆಲೆಯನ್ನು ಪ್ರತಿ ಸಾವಿರ ಲೀಟರ್ ಗೆ 2811.38 ರೂ. ಕಡಿಮೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...