alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಪಕ್ಷದ ಬ್ಯಾಂಕ್‌ ಖಾತೆಯಲ್ಲಿರುವ ಹಣವೆಷ್ಟು ಗೊತ್ತಾ…?

ಬಹುಜನ ಸಮಾಜ ಪಾರ್ಟಿಯ ಬ್ಯಾಂಕ್‌ ಖಾತೆಯಲ್ಲಿರುವ ಹಣ ನಿಮ್ಮನ್ನು ದಂಗಾಗಿಸುತ್ತೆ. ಏಕೆಂದರೆ ಬ್ಯಾಂಕ್ ಬ್ಯಾಲೆನ್ಸ್ ಪ್ರಕಾರ ಬಹುಜನ ಸಮಾಜ ಪಾರ್ಟಿ ಅತಿ ಶ್ರೀಮಂತ ಪಕ್ಷ ಎನಿಸಿಕೊಂಡಿದೆ.

ಚುನಾವಣಾ ಆಯೋಗಕ್ಕೆ ಇತ್ತೀಚೆಗೆ ಸಲ್ಲಿಸಿರುವ ಅಧಿಕೃತ ಮಾಹಿತಿ ಪ್ರಕಾರ 2018ರ ಅಕ್ಟೋಬರ್ ವರೆಗಿನ ಅಂಕಿ-ಅಂಶಗಳ ಪ್ರಕಾರ ಬಿ.ಎಸ್‍.ಪಿ. ಒಟ್ಟು 665 ಕೋಟಿ ರೂ. ಬ್ಯಾಂಕ್ ಬ್ಯಾಲೆನ್ಸ್ ಹೊಂದಿದೆ. ದೇಶದ ಸಾರ್ವಜನಿಕ ಕ್ಷೇತ್ರದ 8 ಬ್ಯಾಂಕ್‍ ಗಳ ಖಾತೆಯಲ್ಲಿ ಈ ಹಣವನ್ನು ಪಕ್ಷ ಇಟ್ಟಿದೆ.

ಇನ್ನು ಎರಡು ಮತ್ತು ಮೂರನೇ ಸ್ಥಾನದಲ್ಲಿ ಕ್ರಮವಾಗಿ ಎಸ್‍.ಪಿ. ಮತ್ತು ಕಾಂಗ್ರೆಸ್ ಪಕ್ಷಗಳಿವೆ. ಎಸ್‍ಪಿ 482, ಕಾಂಗ್ರೆಸ್ 136 ಕೋಟಿ ರೂ. ಬ್ಯಾಂಕ್ ಬ್ಯಾಲೆನ್ಸ್ ಹೊಂದಿದೆ. ಉಳಿದಂತೆ ಟಿಡಿಪಿ(73), ಬಿಜೆಪಿ(66), ಸಿಪಿಎಂ(5), ಎಎಪಿ(3) ಕೋಟಿ ರೂ. ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವ ಮೂಲಕ ನಂತರದ ಸ್ಥಾನಗಳಲ್ಲಿವೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ಕಾಣಲಿದೆಯಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ?

    View Results

    Loading ... Loading ...