alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಲಿಪ್ಕಾರ್ಟ್ ನಲ್ಲಿ ಇಂದಿನಿಂದ ಸಿಗಲಿದೆ ಆಸೂಸ್ ಝೆನ್ಫೋನ್ 5 ಝೆಡ್

ಬಿಡುಗಡೆಯಾಗಿ ಒಂದು ವಾರದ ನಂತ್ರ ಆಸೂಸ್ ಝೆನ್ಫೋನ್ 5 ಝೆಡ್ ಮಾರಾಟಕ್ಕೆ ಲಭ್ಯವಿದೆ. ಒನ್ ಪ್ಲಸ್ 6 ಹಾಗೂ ಒನರ್ 10 ಗೆ ಟಕ್ಕರ್ ನೀಡಲು ಆಸೂಸ್ ಝೆನ್ಫೋನ್ ಬಿಡುಗಡೆ ಮಾಡಲಾಗಿದೆ. ಫೋನ್ ಫ್ಲಿಪ್ಕಾರ್ಟ್ ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಫೋನ್ ನಾಚ್ ವಿನ್ಯಾಸದ ಜೊತೆ 19:9 ಡಿಸ್ಪ್ಲೇ ಹೊಂದಿದೆ.

ಫೋನ್ ಗೆ 8 ಜಿಬಿ ರ್ಯಾಮ್ ನೀಡಲಾಗಿದೆ. ಫೋನ್ 256 ಜಿಬಿ ಸ್ಟೋರೇಜ್ ಜೊತೆ ಬರಲಿದೆ ಎಂದು ಎಂಡಬ್ಲ್ಯೂ ಸಿ ಹೇಳಿತ್ತು. ಆಸೂಸ್ ಝೆನ್ಫೋನ್ 5 ಝೆಡ್ ಫೋನನ್ನು ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. 6 ಜಿಬಿ ರ್ಯಾಮ್ ಜೊತೆ 64 ಜಿಬಿ ಸ್ಟೋರೇಜ್ ಹೊಂದಿರುವ ಫೋನ್ ಬೆಲೆ 29,999 ರೂಪಾಯಿ. 6 ಜಿಬಿ ರ್ಯಾಮ್ ಹಾಗೂ 128 ಜಿಬಿ ಸ್ಟೋರೇಜ್ ಹೊಂದಿರುವ ಮೊಬೈಲ್ ಬೆಲೆ 32,999 ರೂಪಾಯಿ. 8 ಜಿಬಿ ರ್ಯಾಮ್ ಹಾಗೂ 256 ಜಿಬಿ ಸ್ಟೋರೇಜ್ ಹೊಂದಿರುವ ಮೊಬೈಲ್ ಬೆಲೆ 36,999 ರೂಪಾಯಿ.

ಬಿಡುಗಡೆ ಯೋಜನೆಯಲ್ಲಿ ಕಂಪನಿ ಐಸಿಐಸಿಐ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ದಾರರಿಗೆ 3 ಸಾವಿರ ರೂಪಾಯಿ ರಿಯಾಯಿತಿ ನೀಡ್ತಿದೆ. ಫೋನ್ ಇಎಂಐ ನಲ್ಲೂ ಗ್ರಾಹಕರಿಗೆ ಸಿಗಲಿದೆ. ಗ್ರಾಹಕ ಪ್ರತಿ ತಿಂಗಳು 3,333 ರೂಪಾಯಿ ಪಾವತಿಸಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...