alex Certify
ಕನ್ನಡ ದುನಿಯಾ       Mobile App
       

Kannada Duniya

ಚೀನಾ ಉತ್ಪನ್ನಗಳಿಗೆ ಭಾರತೀಯರ ಬಹಿಷ್ಕಾರ

china-productಪಾಕಿಸ್ತಾನ ಹಾಗೂ ಜೈಶ್-ಇ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್ ನನ್ನು ವಿಶ್ವಸಂಸ್ಥೆಯಲ್ಲಿ ಬೆಂಬಲಿಸಿರುವ ಚೀನಾದ ನಿಲುವು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.

ಚೀನಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವೂ ವ್ಯಕ್ತವಾಗ್ತಿದೆ. ಹಬ್ಬದ ಸೀಸನ್ ಬಂದಿರೋದ್ರಿಂದ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಹಲವರು ಕರೆ ನೀಡಿದ್ದಾರೆ.

ಕೋಲ್ಕತ್ತಾದ ರಾಹುಲ್ ಅಹುಜಾ ದೀಪಾವಳಿ ಶಾಪಿಂಗ್ ಗೆ ತೆರಳಿದ್ದರಂತೆ. 200- 2000 ರೂಪಾಯಿವರೆಗಿನ ಹಲವು ಗಿಫ್ಟ್ ಐಟಂಗಳನ್ನು ಆಯ್ಕೆ ಮಾಡಿದ ಅವರು ಎಲ್ಲವನ್ನೂ ಒಮ್ಮೆ ಸೂಕ್ಷ್ಮವಾಗಿ ಗಮನಿಸಿದ್ರು. ಅವುಗಳಲ್ಲಿ ಬಹುತೇಕ ವಸ್ತುಗಳು ಚೀನಾದಲ್ಲಿ ತಯಾರಾಗಿದ್ದವು. ಅವನ್ನೆಲ್ಲ ಕೌಂಟರ್ ನಲ್ಲೇ ಬಿಟ್ಟು ರಾಹುಲ್ ಹೊರಬಂದ್ರು. ಯೋಧರು ನಮಗಾಗಿ ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವಾಗ ಕಪಟ ಚೀನಾದ ವಸ್ತುಗಳನ್ನು ಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ ಎನ್ನುತ್ತಾರೆ ಅವರು.

ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಕೂಡ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಚೀನಾ ನಮ್ಮ ಸ್ನೇಹಿತ ರಾಷ್ಟ್ರವಲ್ಲ, ಹಾಗಾಗಿ ಚೀನಾ ಉತ್ಪನ್ನಗಳನ್ನು ದೂರವಿಟ್ಟು ಸ್ವದೇಶಿ ದೀಪಾವಳಿ ಆಚರಿಸೋಣ ಅಂತಾ ಆಸ್ಸಾಂ ಸಚಿವ ಹಿಮಂತ್ ಬಿಸ್ವಾ ಕೂಡ ಮನವಿ ಮಾಡಿದ್ದಾರೆ. ಪ್ರತಿ ವರ್ಷ ದುರ್ಗಾ ಪೂಜೆ, ದೀಪಾವಳಿ ಸಂದರ್ಭದಲ್ಲಿ ಭಾರತದಲ್ಲಿ ಅಲಂಕಾರಿಕ ಲೈಟ್ ಗಳು, ಲ್ಯಾಂಪ್ ಗಳು, ಗಿಫ್ಟ್ ಐಟಂ, ಪಟಾಕಿ ಸೇರಿದಂತೆ ಹಲವು ಚೀನಾ ಉತ್ಪನ್ನಗಳು ಮಾರಾಟವಾಗುತ್ತವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...