alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಕಿಲೋ ಸಕ್ಕರೆಗೆ 200 ರೂ. ಉಪ್ಪಿಗೆ 150 ರೂ..!

soldiers-647_060817044516

ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ. ಒಂದು ಕೆ.ಜಿ. ಸಕ್ಕರೆಗೆ 200 ರೂಪಾಯಿ ಹಾಗೂ ಉಪ್ಪಿಗೆ 150 ರೂಪಾಯಿ ನೀಡುವ ಪ್ರದೇಶವೂ ನಮ್ಮ ದೇಶದಲ್ಲಿದೆ. ಯಸ್, ಅರುಣಾಚಲ ಪ್ರದೇಶದ ಗಡಿಯಲ್ಲಿರುವ ವಿಜಯನಗರದಲ್ಲಿ ನಿವೃತ್ತ ಸೈನಿಕರು ವಾಸವಾಗಿದ್ದಾರೆ. ಅವರಿಗೆ ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ದುಬಾರಿ ಹಣ ತೆರಬೇಕಾದ ಪರಿಸ್ಥಿತಿ ಇದೆ.

ಭಾರತ-ಮ್ಯಾನ್ಯಾರ್ ಗಡಿಯಲ್ಲಿ ಈ ಪ್ರದೇಶವಿದೆ. ದಟ್ಟ ಕಾಡುಗಳ ಮೂಲಕ ಇಲ್ಲಿಗೆ ತಲುಪಲು ಸುಮಾರು 7-10 ದಿನ ಬೇಕು. ವಿಜಯನಗರದ ವಿಸ್ತೀರ್ಣ 8 ಸಾವಿರ ಚದರ ಕಿಲೋಮೀಟರ್ . ವಿಜಯನಗರ ಅನೇಕ ವಿಶಿಷ್ಠತೆಗಳಿಂದ ಕೂಡಿದೆ. 1961ರಲ್ಲಿ ಅಸ್ಸಾಂ ರೈಫಲ್ಸ್ ಅರೆಸೈನಿಕ ಪಡೆ ಈ ಪ್ರದೇಶವನ್ನು ಪತ್ತೆ ಹಚ್ಚಿತ್ತು. ನಂತ್ರ ಇದಕ್ಕೆ ವಿಜಯನಗರವೆಂದು ಹೆಸರಿಡಲಾಗಿತ್ತು.

ಇಲ್ಲಿ ವಾಸಿಸುವ ಮಾಜಿ ಸೈನಿಕರ ಕುಟುಂಬ ಸಾಕಷ್ಟು ಸಮಸ್ಯೆಗಳನ್ನು ಎದುರಿಸ್ತಾ ಇದೆ. ಉತ್ತಮ ಆರೋಗ್ಯ ಹಾಗೂ ಹಣದ ಭರವಸೆ ನೀಡಿ ಸೈನಿಕರಿಗೆ ಇಲ್ಲಿ ನಿವಾಸ ನೀಡಲಾಗಿತ್ತು. ಆದ್ರೀಗ ಯಾವುದೇ ಸೌಲಭ್ಯವಿಲ್ಲ. ಸೂಕ್ತ ರಸ್ತೆ, ಆಸ್ಪತ್ರೆ, ನೀರು, ಶಿಕ್ಷಣ ಸೇರಿದಂತೆ ಯಾವುದೇ ವ್ಯವಸ್ಥೆ ಇಲ್ಲದೆ ಇಲ್ಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಆಸ್ಪತ್ರೆಗೆ ಹೋಗಲು ಸರಿಯಾದ ರಸ್ತೆಯಿಲ್ಲ. ಇದ್ರಿಂದಾಗ ರೋಗಿಗಳು ಪರದಾಡಬೇಕು. ಸೂಕ್ತ ಚಿಕಿತ್ಸೆ ಸಿಗದೆ ರೋಗಿಗಳು ಮೃತಪಟ್ಟ ಉದಾಹರಣೆಯೂ ಇದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಇಲ್ಲಿನವರಿಗೆ ಸಾಧ್ಯವಾಗ್ತಾ ಇಲ್ಲ. ಸ್ಥಳೀಯರೊಬ್ಬರು ಪ್ರಾಥಮಿಕ ಶಾಲೆಯನ್ನು ತೆರೆದಿದ್ದು, ಪತ್ನಿ ಜೊತೆ ಮಕ್ಕಳಿಗೆ ಶಿಕ್ಷಣ ನೀಡುವ ಪ್ರಯತ್ನ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...