alex Certify
ಕನ್ನಡ ದುನಿಯಾ       Mobile App
       

Kannada Duniya

ಕುತೂಹಲ ಮೂಡಿಸಿದೆ ಕೊನೆಯ ಬಜೆಟ್, ಹೇಗೆ ಅಂತಿರಾ..?

ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಅವರು ಸಂಪೂರ್ಣವಾದ ಕೊನೆಯ ಬಜೆಟ್ ಮಂಡಿಸಲು ರೆಡಿಯಾಗಿದ್ದಾರೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ಇದು ಕೊನೆಯ ಸಂಪೂರ್ಣ ಬಜೆಟ್ ಆಗಿದ್ದು, ಭಾರೀ ಕುತೂಹಲ ಮೂಡಿಸಿದೆ.

ದೇಶದ ತೆರಿಗೆ ವ್ಯವಸ್ಥೆಯಲ್ಲಿ ಮಹತ್ತರವಾದ ಬದಲಾವಣೆ ಆಗಿದೆ. ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿಯಾಗಿದ್ದು ರಾಜ್ಯಗಳು ಹಾಗೂ ಕೇಂದ್ರದಲ್ಲಿನ ತೆರಿಗೆ ಸ್ವರೂಪ ಬದಲಾಗಿದೆ. ಹಿಂದಿನ ಬಜೆಟ್ ಗಳಿಗಿಂತ ಜೇಟ್ಲಿ ಅವರಿಗೆ ಈ ಸಲದ ಬಜೆಟ್ ವಿಭಿನ್ನವಾಗಿದೆ.

ಬಜೆಟ್ ಸಾಮಾನ್ಯವಾಗಿ 2 ಪ್ರಮುಖ ಅಂಶಗಳನ್ನು ಒಳಗೊಂಡಿರುತ್ತದೆ. ಮುಂದಿನ ಹಣಕಾಸು ವರ್ಷಕ್ಕೆ ಕೈಗೊಳ್ಳಲಿರುವ ಹೊಸ ಯೋಜನೆಗಳು, ಕ್ಷೇತ್ರಗಳಿಗೆ ಸಂಬಂಧಿಸಿದ ಘೋಷಣೆಗಳು ಇರುತ್ತವೆ.

ಅದರೊಂದಿಗೆ ನೇರ ಮತ್ತು ಪರೋಕ್ಷವಾದ ತೆರಿಗೆಗಳ ಬಗ್ಗೆ ಪ್ರಕಟಣೆಯನ್ನು ನೀಡಲಾಗುತ್ತದೆ. ಜಿ.ಎಸ್.ಟಿ. ಬಂದ ಬಳಿಕ ತೆರಿಗೆ ಸ್ವರೂಪದಲ್ಲಿ ಬದಲಾವಣೆಗಳಾದರೂ, ಪ್ರಮುಖವಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ಇದರಿಂದ ಹೊರಗಿಡಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ, ಅಬಕಾರಿ ಸುಂಕ, ರಾಜ್ಯ ತೆರಿಗೆಗಳಿಂದಾಗಿ ಪೆಟ್ರೋಲ್, ಡೀಸೆಲ್ ಬೆಲೆ ನಿಯಂತ್ರಣಕ್ಕೆ ಸಿಗದಂತಾಗಿದೆ.

ಚುನಾವಣೆಗೆ ಸಿದ್ಧತೆಯ ವರ್ಷ ಇದಾಗಿರುವುದರಿಂದ ಮತ್ತು ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಿರುವುದರಿಂದ ಬಜೆಟ್ ನಲ್ಲಿ ಜನಪ್ರಿಯತೆಗೆ ಒತ್ತು ನೀಡುವ ಸಾಧ್ಯತೆಯಂತೂ ಇದೆ. ಇನ್ನು ರೈಲ್ವೇ ಬಜೆಟ್ ಕೂಡ ಸಾಮಾನ್ಯ ಬಜೆಟ್ ನಲ್ಲಿಯೇ ಸೇರಿದೆ.

ರೈಲ್ವೇ, ಕೃಷಿ, ಉದ್ಯೋಗ ಸೃಷ್ಠಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಆದಾಯ ತೆರಿಗೆ ಮೊದಲಾದವು ಬಜೆಟ್ ನಲ್ಲಿ ಆದ್ಯತೆಯ ವಿಷಯಗಳಾಗಿರುತ್ತವೆ. ಹಾಗಾಗಿ, ಅರುಣ್ ಜೇಟ್ಲಿ ಮಂಡಿಸಲಿರುವ ಕೊನೆಯ ಸಂಪೂರ್ಣವಾದ ಬಜೆಟ್ ಕುರಿತಾಗಿ ಭಾರೀ ಕುತೂಹಲ ಮೂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...