alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲರಿಗೂ ಆರೋಗ್ಯ ವಿಮೆ, ಬಜೆಟ್ ನಲ್ಲಿ ಸಿಗಲಿದೆ ಸಿಹಿ ಸುದ್ದಿ

ನವದೆಹಲಿ: ಎಲ್ಲರಿಗೂ ಆರೋಗ್ಯ ವಿಮೆ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ ಬಜೆಟ್ ನಲ್ಲಿ ಈ ಕುರಿತು ಘೋಷಣೆ ಮಾಡಲಿದ್ದಾರೆ.

ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಜಾರಿಗೆ ತಂದಿದ್ದ ಒಬಾಮಾ ಕೇರ್ ಮಾದರಿಯಲ್ಲಿ ದೇಶದ ಎಲ್ಲಾ ಜನರಿಗೆ ಆರೋಗ್ಯ ವಿಮೆ ಒದಗಿಸುವ ಯೋಜನೆ ರೂಪಿಸಲಾಗಿದೆ.

ಇದರಲ್ಲಿ ಕಲ್ಯಾಣ್ ಯೋಜನೆಯಡಿ ಬಿ.ಪಿ.ಎಲ್. ಕುಟುಂಬಗಳಿಗೆ ಶೇ. 80 ರಷ್ಟು ವಿಮೆಯನ್ನು ಸರ್ಕಾರ ಪಾವತಿಸುತ್ತದೆ. ಸೌಭಾಗ್ಯ ಯೋಜನೆಯಡಿ ವಾರ್ಷಿಕ 2 ಲಕ್ಷ ರೂ. ವರೆಗಿನ ಆದಾಯ ಹೊಂದಿದವರು ಅನುಕೂಲ ಪಡೆದುಕೊಳ್ಳಬಹುದು. ಉದಯ್ ಯೋಜನೆಯಡಿ ವಾರ್ಷಿಕ 2 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿದವರಿಗೆ ಸೌಲಭ್ಯ ನೀಡಲಾಗುವುದು.

ಬಿ.ಪಿ.ಎಲ್. ಕುಟುಂಬಗಳು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ನೀಡಲಾಗುತ್ತಿರುವ ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆಯನ್ನು ಹೊಸ ಯೋಜನೆಯಲ್ಲಿ ವಿಲೀನಗೊಳಿಸಲಾಗುವುದು. ಎಲ್ಲರಿಗೂ ಆರೋಗ್ಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಆರೋಗ್ಯ ವಿಮೆ ಯೋಜನೆ ರೂಪಿಸಲಾಗಿದೆ.

ರಾಜ್ಯದಲ್ಲಿಯೂ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...