alex Certify
ಕನ್ನಡ ದುನಿಯಾ       Mobile App
       

Kannada Duniya

ಯಾವಾಗ ತಿನ್ನಬೇಕು?ಯಾವಾಗ ವಿಶ್ರಾಂತಿ ಪಡೀಬೇಕು? ಎಲ್ಲವನ್ನೂ ಹೇಳುತ್ತೆ ಈ ಆ್ಯಪ್

ಜನರು ಕಾಲದ ಜೊತೆ ಓಡ್ತಿದ್ದಾರೆ. ಕೆಲಸದ ಒತ್ತಡದಲ್ಲಿ ಜನರಿಗೆ ತಮ್ಮ ಆಹಾರ, ವಿಶ್ರಾಂತಿಗೆ ಸಮಯ ನೀಡಲು ಸಾಧ್ಯವಾಗ್ತಿಲ್ಲ. ಇದು ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ. ಆದ್ರೆ ಯಾವಾಗ ಆಹಾರ ಸೇವನೆ ಮಾಡಬೇಕು, ಯಾವಾಗ ವಿಶ್ರಾಂತಿ ಪಡೆಯಬೇಕು ಎನ್ನುವ ಬಗ್ಗೆ ಮೊಬೈಲ್ ಆ್ಯಪ್ ಗಳು ನಿಮ್ಮನ್ನು ಎಚ್ಚರಿಸಲಿವೆ. ಗೂಗಲ್ ಪ್ಲೇನಲ್ಲಿ ಇಂಥ ಅನೇಕ ಆ್ಯಪ್ ಗಳಿವೆ.

Take a Break : Take a Break ಆ್ಯಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ನಿಮಗೆ ಲಭ್ಯವಿದೆ. ಇದನ್ನು ಉಚಿತವಾಗಿ ನೀವು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಇದನ್ನು 1 ಲಕ್ಷಕ್ಕೂ ಹೆಚ್ಚು ಬಳಕೆದಾರರು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಇದಕ್ಕೆ 4.2 ಸ್ಟಾರ್ ಸಿಕ್ಕಿದೆ. 1500ಕ್ಕೂ ಹೆಚ್ಚು ಮಂದಿ ರೇಟಿಂಗ್ಸ್ ನೀಡಿದ್ದಾರೆ. ಇದು ನೀವು ಯಾವಾಗ ಆಹಾರ ಸೇವನೆ ಮಾಡಬೇಕು. ಯಾವಾಗ ವಿಶ್ರಾಂತಿ ಪಡೆಯಬೇಕು ಎನ್ನುವ ಬಗ್ಗೆ ಮಾಹಿತಿ ನೀಡಲಿದೆ. ಇದ್ರಲ್ಲಿ ಧ್ಯಾನಕ್ಕೆ ಸಂಬಂಧಿಸಿದಂತೆ ವಿಶೇಷ ಫೀಚರ್ ನೀಡಲಾಗಿದೆ.

Calorie Counter : ಇದೊಂದು ನ್ಯೂಟ್ರಿಷನ್ ಆ್ಯಪ್ ಆಗಿದೆ. ಆರೋಗ್ಯ ವೃದ್ಧಿಗೆ ಏನನ್ನು ತಿನ್ನಬೇಕು. ಏನನ್ನು ತಿನ್ನಬಾರದು ಎಂಬುದನ್ನು ಈ ಆ್ಯಪ್ ಹೇಳುತ್ತದೆ. 5 ಕೋಟಿ ಬಾರಿ ಈ ಆ್ಯಪ್ ಡೌನ್ಲೋಡ್ ಆಗಿದೆ. ಇದಕ್ಕೆ 4.6 ಸ್ಟಾರ್ ಸಿಕ್ಕಿದೆ.

Lifesum : ಇದು 50 ಲಕ್ಷ ಬಳಕೆದಾರರನ್ನು ಹೊಂದಿದೆ. ಇದಕ್ಕೆ 4.4 ರೇಟಿಂಗ್ ನೀಡಲಾಗಿದೆ. ಆಹಾರದ ಬಗ್ಗೆ ನಿಮ್ಮಲ್ಲಿ ಸಮಸ್ಯೆಯಿದ್ದರೆ ಇದ್ರ ಉಪಯೋಗ ಪಡೆಯಬಹುದು. ಪುರುಷರು ಹಾಗೂ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಬೇರೆ ಬೇರೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...