alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮೇಲೆ ಬೆಂಗಳೂರಲ್ಲೂ ತಯಾರಾಗಲಿದೆ ಐಫೋನ್

apple

ಭಾರತೀಯ ಮಾರುಕಟ್ಟೆಗಾಗಿ ಬೆಂಗಳೂರಿನಲ್ಲೇ ಐಫೋನ್ ತಯಾರಿಸಲು ಆಪಲ್ ಕಂಪನಿ ಮುಂದಾಗಿದೆ. ಸಿಲಿಕಾನ್ ಸಿಟಿಯ ಕೈಗಾರಿಕೆಗಳ ಕೇಂದ್ರವೆಂದೇ ಕರೆಯಲ್ಪಡುವ ಪೀಣ್ಯದಲ್ಲಿ ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.

ಬರುವ ಏಪ್ರಿಲ್ ನಿಂದ ಬೆಂಗಳೂರಲ್ಲಿ ಐಫೋನ್ ಉತ್ಪಾದನೆ ಆರಂಭವಾಗಲಿದೆ. ಮೊದಲು ಇಲ್ಲಿ ಐಫೋನ್ ಬಿಡಿಭಾಗಗಳನ್ನು ಜೋಡಿಸುವ ಕಾರ್ಯಕ್ಕೆ ಚಾಲನೆ ಸಿಗಲಿದೆ, ವರ್ಷಾಂತ್ಯದೊಳಗೆ ಬೆಂಗಳೂರಲ್ಲೇ ಬಿಡಿಭಾಗಗಳನ್ನು ಉತ್ಪಾದಿಸಲಾಗುತ್ತದೆ ಅಂತಾ ಕಂಪನಿಯ ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ ಮಹಾರಾಷ್ಟ್ರದಲ್ಲಿ ಉತ್ಪಾದನಾ ಘಟಕ ತೆರೆಯಲು ಸಹ ಉದ್ದೇಶಿಸಲಾಗಿತ್ತು. ಅಲ್ಲಿ ಕೇವಲ ಐಫೋನ್ ಗಳನ್ನು ಮಾತ್ರ ತಯಾರಿಸಲಾಗುತ್ತದೆ ಅಂತಾ ಹೇಳಲಾಗಿತ್ತು, ಆದ್ರೆ ಕ್ಸಿಯೋಮಿ ಹಾಗೂ ವನ್ ಪ್ಲಸ್ ಕೂಡ ಟೈಯಪ್ ಮಾಡಿಕೊಂಡಿವೆ. ಭಾರತ ಪ್ರವಾಸ ಕೈಗೊಂಡಿದ್ದ ಆಪಲ್ ಸಿಇಓ ಟಿಮ್ ಕುಕ್, ಇಲ್ಲೂ ಐಫೋನ್ ಗಳಿಗೆ ಭಾರೀ ಬೇಡಿಕೆ ಇರುವುದನ್ನು ಮನಗಂಡಿದ್ದಾರೆ. ಅಕ್ಟೋಬರ್ 2015 ರಿಂದ ಸೆಪ್ಟೆಂಬರ್ 2016 ರ ವರೆಗೆ ಭಾರತದಲ್ಲಿ 2.5 ಮಿಲಿಯನ್ ಐಫೋನ್ ಗಳು ಮಾರಾಟವಾಗಿವೆ. ಕಳೆದ ವರ್ಷಕ್ಕಿಂತ ಮಾರಾಟ ಪ್ರಮಾಣ ಶೇ.50 ರಷ್ಟು ಹೆಚ್ಚಾಗಿದೆ. 2016ರಲ್ಲಿ ಆಪಲ್ ಇಂಡಿಯಾ 9,997 ಕೋಟಿ ರೂಪಾಯಿ ವಹಿವಾಟು ನಡೆಸಿದೆ. ಬೆಂಗಳೂರಿನಲ್ಲಿ ಆರಂಭವಾಗುತ್ತಿರುವ ಘಟಕದಲ್ಲಿ ಕೆಲವು ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...