alex Certify
ಕನ್ನಡ ದುನಿಯಾ       Mobile App
       

Kannada Duniya

ಐಫೋನ್ 7 ಗಾಗಿ ಕ್ಯೂ ಹಚ್ಚಿದ್ದಾರೆ ಜನ

apple-iphone-7-iphone-7-plus-launch-in-india-huge-queues-seen-outside-storesಬಹು ನಿರೀಕ್ಷೆಯ ಆಪಲ್ ಕಂಪನಿಯ ಐಫೋನ್ 7 ಹಾಗೂ ಐಫೋನ್ 7 ಪ್ಲಸ್ ಭಾರತದಲ್ಲಿ ಅಕ್ಟೋಬರ್ 7 ರಂದು ಬಿಡುಗಡೆಯಾಗಿದೆ. ಈ ಫೋನ್ ಅನ್ನು ಪ್ರಥಮವಾಗಿ ಪಡೆಯಬೇಕೆಂಬ ಕಾತುರದಿಂದ ಗ್ರಾಹಕರು ಸರದಿ ಸಾಲಿನಲ್ಲಿ ನಿಂತಿರುವುದು ಹಲವೆಡೆ ಕಂಡು ಬಂದಿದೆ.

ಐಫೋನ್ 7 ಹಾಗೂ ಐಫೋನ್ 7 ಪ್ಲಸ್ ಲಾಂಚ್ ಆದ ಬಳಿಕ ಪ್ರಥಮ ಹಂತದಲ್ಲಿ ಸೆಪ್ಟೆಂಬರ್ 16 ರಂದು 28 ದೇಶಗಳಲ್ಲಿ ಬಿಡುಗಡೆಗೊಂಡಿದ್ದು, ದ್ವಿತೀಯ ಹಂತದಲ್ಲಿ ಸೆಪ್ಟೆಂಬರ್ 24 ರಂದು 30 ದೇಶಗಳಲ್ಲಿ ಬಿಡುಗಡೆಯಾಗಿತ್ತು. ಭಾರತದಲ್ಲಿ ಅಕ್ಟೋಬರ್ 7 ರಂದು ಬಿಡುಗಡೆ ಮಾಡುವುದಾಗಿ ಆಪಲ್ ಕಂಪನಿ ಘೋಷಿಸಿತ್ತಾದರೂ ಅದಕ್ಕೂ ಮುನ್ನವೇ ಕಳ್ಳ ಸಾಗಾಣಿಕೆ ಮೂಲಕ ಹಲವು ಹ್ಯಾಂಡ್ ಸೆಟ್ ಗಳು ರವಾನೆಯಾಗಿದ್ದವು.

ಇದೀಗ ಭಾರತದಲ್ಲಿ ಐಫೋನ್ 7 ಹಾಗೂ ಐಫೋನ್ 7 ಪ್ಲಸ್ ಅಧಿಕೃತವಾಗಿ ಬಿಡುಗಡೆಗೊಂಡಿದ್ದು, ಇದನ್ನು ಕೊಂಡುಕೊಳ್ಳಲು ನೋಯ್ಡಾದಲ್ಲಿ ಗ್ರಾಹಕರು ಸರದಿ ಸಾಲಿನಲ್ಲಿ ನಿಂತಿದ್ದಾರೆ. ದುಬಾರಿ ಬೆಲೆಯ ಈ ಐಫೋನ್ ಗಳು ಆಫರ್ ನಲ್ಲಿ ಸುಮಾರು 10 ಸಾವಿರ ರೂ. ಕಡಿಮೆ ದರದಲ್ಲಿ ಲಭಿಸುತ್ತಿದ್ದು, ಈ ಸೌಲಭ್ಯ ಪಡೆಯಲು ಗ್ರಾಹಕರು ಮುಂದಾಗಿರುವುದು ಹಲವೆಡೆ ಕಂಡು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...