alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ಆಪಲ್ ಐಫೋನ್ 7 ಆರಂಭಿಕ ಬೆಲೆ

Apple-iPhone-7-

ನವದೆಹಲಿ: ಗ್ರಾಹಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ‘ಆಪಲ್ ಐಫೋನ್ 7’ ಭಾರತಕ್ಕೆ ಯಾವಾಗ ಬರಲಿದೆ. ಬೆಲೆ ಎಷ್ಟಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

ಸೆಪ್ಟಂಬರ್ 7 ರಂದು ಬಿಡುಗಡೆಯಾಗಿರುವ ಆಪಲ್ ಐಫೋನ್ 7, ಸೆ. 16 ರಿಂದ ಅಮೆರಿಕ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಆಪಲ್ ಐಫೋನ್ 7 ಮತ್ತು ಆಪಲ್ ಐಫೋನ್ 7 ಪ್ಲಸ್ ಫೋನ್ ಗಳು ಗೋಲ್ಡ್, ಸಿಲ್ವರ್, ಗೋಲ್ಡ್ ರೋಸ್ ಕಪ್ಪು ಹಾಗೂ ಕಡುಗಪ್ಪು ಬಣ್ಣದಲ್ಲಿ ಲಭ್ಯವಿದ್ದು, ಅಕ್ಟೋಬರ್ 7 ರಿಂದ ಭಾರತದ ಮಾರುಕಟ್ಟೆಯಲ್ಲಿ ಸಿಗಲಿವೆ. ಭಾರತದಲ್ಲಿ 32 ಜಿ.ಬಿ. ಐಫೋನ್ ಆರಂಭಿಕ ಬೆಲೆ 60,000 ರೂ ನಿಗದಿಯಾಗಿದೆ.

32 ಜಿ.ಬಿ., 128 ಜಿ.ಬಿ. ಮತ್ತು 256 ಜಿ.ಬಿ. ಸ್ಟೋರೇಜ್ ಇರುವ ಸೆಟ್ ಗಳು ಭಾರತದ ಮಾರುಕಟ್ಟೆಯಲ್ಲಿ ಸಿಗಲಿವೆ. ಆಪಲ್ ಐಫೋನ್ 7 ಮತ್ತು ಆಪಲ್ ಐಫೋನ್ 7 ಪ್ಲಸ್ ಈಗಿನ ಟ್ರೆಂಡ್ ಗೆ ತಕ್ಕಂತೆ ತಯಾರಾಗಿದ್ದು, ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...