alex Certify
ಕನ್ನಡ ದುನಿಯಾ       Mobile App
       

Kannada Duniya

ಐಫೋನ್ ಪ್ರಿಯರಿಗೆ ಶಾಕ್ ಕೊಟ್ಟಿದೆ ಆಪಲ್ ಕಂಪನಿ

ಆ್ಯಪಲ್ ಕಂಪನಿ ಐಫೋನ್ ಗಳ ಬೆಲೆ ಏರಿಕೆ ಮಾಡಿದೆ. iPhone SE ಒಂದನ್ನು ಹೊರತುಪಡಿಸಿ ಉಳಿದೆಲ್ಲಾ ಮೊಬೈಲ್ ಗಳ ಮೇಲಿನ ಬೆಲೆ ಶೇ.3.5ರಷ್ಟು ಹೆಚ್ಚಳವಾಗಿದೆ. iPhone SE ಯನ್ನು ಭಾರತದಲ್ಲೇ ಅಸೆಂಬಲ್ ಮಾಡುವುದರಿಂದ ಈ ಸ್ಮಾರ್ಟ್ ಫೋನ್ ದರ ಏರಿಕೆಯಾಗಿಲ್ಲ.

ಭಾರತ ಸರ್ಕಾರ ಮೊಬೈಲ್ ಫೋನ್ ಗಳ ಮೇಲಿನ ಆಮದು ಸುಂಕವನ್ನು ಕಳೆದ ವಾರ ಶೇ.5 ರಷ್ಟು ಹೆಚ್ಚಳ ಮಾಡಿತ್ತು. ಹಾಗಾಗಿ ಆ್ಯಪಲ್ ಕಂಪನಿ ದರ ಏರಿಕೆ ಮಾಡಿದೆ. 256 ಜಿಬಿ iPhone X ಮೊಬೈಲ್ ಬೆಲೆ ಈಗ 3000-3500 ರೂಪಾಯಿ ಹೆಚ್ಚಳವಾಗಿದೆ. ಐಫೋನ್ 6 ಮತ್ತು 6ಎಸ್ ಗಳ ಮೇಲಿನ ದರ ಕೂಡ 1500 ರೂಪಾಯಿ ಏರಿಕೆ ಕಂಡಿದೆ.

ದರ ಪರಿಷ್ಕರಣೆಯನ್ನು ಆ್ಯಪಲ್ ಕಂಪನಿ ಖಚಿತಪಡಿಸಿದ್ದು, ಇಂದಿನಿಂದ್ಲೇ ಹೊಸ ಬೆಲೆ ಜಾರಿಯಾಗಲಿದೆ. ಆ್ಯಪಲ್ ಕಂಪನಿಯ ವೆಬ್ ಸೈಟ್ ನಲ್ಲಿ ಕೂಡ ಪರಿಷ್ಕೃತ ದರವನ್ನು ಅಪ್ಡೇಟ್ ಮಾಡಲಾಗಿದೆ. ಇದಕ್ಕೂ ಮೊದಲು ಭಾರತದಲ್ಲಿ ಮೊಬೈಲ್ ಗಳ ಮೇಲಿನ ಆಮದು ಸುಂಕ ಶೇ.10ರಷ್ಟಿತ್ತು, ಅದನ್ನು ಶೇ.15ರಷ್ಟು ಹೆಚ್ಚಳ ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...