alex Certify
ಕನ್ನಡ ದುನಿಯಾ       Mobile App
       

Kannada Duniya

ಖುಷಿ ಸುದ್ದಿ….ಈ ಕಂಪನಿ ನೀಡ್ತಿದೆ 5 ಸಾವಿರ ಮಂದಿಗೆ ಉದ್ಯೋಗ

ಆಪಲ್ ಕಂಪನಿ ಹೈದ್ರಾಬಾದ್ ನಲ್ಲಿ 3500 ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದೆ. ಈ ಬಗ್ಗೆ ತೆಲಂಗಾಣ ಸರ್ಕಾರ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕಂಪನಿ 5000 ಜನರಿಗೆ ಉದ್ಯೋಗ ನೀಡುವ ಗುರಿ ಹೊಂದಿದೆಯಂತೆ.

ಆಪಲ್ ಹೈದ್ರಾಬಾದ್ ನಲ್ಲಿರುವ ಅಭಿವೃದ್ಧಿ ಕೇಂದ್ರಕ್ಕಾಗಿ ಈ ನೇಮಕಾತಿ ಮಾಡಿಕೊಳ್ತಿದೆ. 3500 ಮಂದಿಗೆ ಕೆಲಸ ಸಿಕ್ಕಿದ್ದು, 5000 ಸಿಬ್ಬಂದಿ ನೇಮಕದ ಕೆಲಸ ನಡೆಯುತ್ತಿದೆ. ಇದಕ್ಕೆ ಯಾವುದೇ ಅಂತಿಮ ಸಮಯವನ್ನು ಕಂಪನಿ ನಿಗದಿ ಮಾಡಿಲ್ಲ.

ಕ್ಯಾಲಿಫೋರ್ನಿಯಾದ ಐಟಿ ಕಂಪನಿ ಹಿಂದಿನ ವರ್ಷ ಹೈದ್ರಾಬಾದ್ ನಲ್ಲಿ ಅಭಿವೃದ್ಧಿ ಕೇಂದ್ರವನ್ನು ತೆರೆದಿತ್ತು. ಈ ಕೇಂದ್ರದಲ್ಲಿ ಕಂಪನಿ ತನ್ನ ಉತ್ಪನ್ನಗಳಾದ ಐಫೋನ್, ಐಪ್ಯಾಡ್, ಮೈಕ್ ಹಾಗೂ ಐಫೋನ್ ವಾಚ್ ಗಳಿಗೆ ಮ್ಯಾಪ್ ಸಿದ್ಧಪಡಿಸಲಿದೆ. ಆರಂಭದಲ್ಲಿಯೇ ಕಂಪನಿ 4 ಸಾವಿರ ಮಂದಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. ಅದ್ರಂತೆ 3500 ಮಂದಿ ನೇಮಕಗೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...