alex Certify
ಕನ್ನಡ ದುನಿಯಾ       Mobile App
       

Kannada Duniya

ಐಫೋನ್ ಖರೀದಿದಾರರಿಗೊಂದು ಗುಡ್ ನ್ಯೂಸ್

ಕೆಲವೊಂದು ಮಾಡೆಲ್ ಗಳ ಬೆಲೆಯಲ್ಲಿ 15,000 ರೂ.ಗಳಷ್ಟು ದರ ಕಡಿಮೆಯಾಗಿದ್ದು, 42,900 ರೂ. ಬೆಲೆಯ ಆಪಲ್ ಐಫೋನ್ 6 ಎಸ್ (32 ಜಿಬಿ) ಈಗ 29,900 ರೂ.ಗಳಿಗೆ ಲಭ್ಯವಾಗುತ್ತಿದೆ.

ಈ ಹಿಂದೆ 52,100 ರೂ.ಗಳಿಗೆ ಮಾರಾಟವಾಗುತ್ತಿದ್ದ 128 ಜಿಬಿಯ ಆಪಲ್ ಐಫೋನ್ 6 ಎಸ್ ಈಗ 39,900 ರೂ. ಗಳಿಗೆ ಲಭ್ಯವಾಗುತ್ತಿದೆ. ಅದೇ ರೀತಿ 52,240 ರೂ. ಬೆಲೆಯ ಐಪೋನ್ 6 ಎಸ್ ಪ್ಲಸ್ ಈಗ 34,900 ರೂ.ಗಳಿಗೆ ದೊರೆಯುತ್ತಿದೆ.

ಬುಧವಾರದಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಆಪಲ್ ಕಂಪನಿ ಐಫೋನ್ ಎಕ್ಸ್ ಎಸ್, ಎಕ್ಸ್ ಎಸ್ ಮ್ಯಾಕ್ಸ್ ಹಾಗೂ ಎಕ್ಸ್ ಆರ್ ಬಿಡುಗಡೆ ಮಾಡಿದ್ದು ಸೆಪ್ಟೆಂಬರ್ 17 ರಿಂದ ಇವು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ. ಈ ಹಿನ್ನೆಲೆಯಲ್ಲಿ ಆಪಲ್, ಭಾರತದ ಮಾರುಕಟ್ಟೆಯಲ್ಲಿದ್ದ ಹಳೆಯ ಐಫೋನ್ ಗಳ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...