alex Certify
ಕನ್ನಡ ದುನಿಯಾ       Mobile App
       

Kannada Duniya

ಇಬೇನಲ್ಲಿ ಇಂದು ಹರಾಜಾಗ್ತಿದೆ ಆಪಲ್ ಶೂ

apple

ಆಪಲ್ ಐಫೋನ್ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ ಆಪಲ್ ಶೂ ಬಗ್ಗೆ ಬಹುಶಃ ಬಹುತೇಕರಿಗೆ ತಿಳಿದಿಲ್ಲ. ಐಫೋನ್, ಮ್ಯಾಕ್ಬುಕ್ ತಯಾರಿಸುವ ಆಪಲ್ ಕಂಪನಿಯ ಶೂ ಹರಾಜಿಗಿದೆ.

ಈ ಶೂವನ್ನು ಆಪಲ್ ತನ್ನ ನೌಕರರಿಗಾಗಿ 1990ರಲ್ಲಿ ಸಿದ್ಧಪಡಿಸಿತ್ತು. ಆಪಲ್ ಬ್ರ್ಯಾಂಡ್ ನ ಈ ಶೂ ಹರಾಜು ಪ್ರಕ್ರಿಯೆ ಇ-ಕಾಮರ್ಸ್ ವೆಬ್ಸೈಟ್ ಇಬೇಯಲ್ಲಿ ಜೂನ್ 11 ರಂದು ನಡೆಯಲಿದೆ. ಅಮೆರಿಕಾದ ಪ್ರಸಿದ್ಧ ಹೆರಿಟೇಜ್ ಕಂಪನಿ ಈ ಶೂವನ್ನು 15 ಸಾವಿರ ಡಾಲರ್ ( 9 ಲಕ್ಷ 65 ಸಾವಿರ ರೂ.) ಆರಂಭಿಕ ಬೆಲೆಗೆ ಹರಾಜಿಗಿಟ್ಟಿದೆ.

ಎಡಿಡಾಸ್ ಈ ಶೂವನ್ನು ತಯಾರಿಸಿದೆ. ಈ ಶೂ ಮೇಲೆ ಆಪಲ್ ಲೋಗೋ ಇದೆ. 2007ರಲ್ಲಿ ಇ-ಕಾಮರ್ಸ್ ವೆಬ್ಸೈಟ್ ಇಬೇನಲ್ಲಿ ಮೊದಲ ಬಾರಿ ಹರಾಜಿಗಿಡಲಾಗಿತ್ತು. ಆ ವೇಳೆ 105 ಡಾಲರ್ ಹರಾಜು ಬೆಲೆ ನಿಗದಿಪಡಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...