alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಬೆಂಗಳೂರಿಗೆ ಬರಲಿದೆ ಕೌಂಟರ್ ಫ್ರೀ ಶಾಪಿಂಗ್ ಔಟ್ ಲೆಟ್

ಶಾಪಿಂಗ್ ಗೆ ಹೋಗಿ ವಸ್ತು ಖರೀದಿಸಿದ ಬಳಿಕ, ಬಿಲ್ಲಿಂಗ್ ಕೌಂಟರ್ ನಲ್ಲಿ ಸಾಲುಗಟ್ಟಿ ನಿಲ್ಲುವುದರಿಂದ ಬೇಸತ್ತಿರುವ ಬೆಂಗಳೂರಿಗರಿಗೊಂದು ಸಿಹಿ ಸುದ್ದಿ.

ಹೌದು, ಅಮೆರಿಕಾದಲ್ಲಿರುವ ಅಮೆಜಾನ್ ಗೋ ಮಾಲ್‌ ನ ಮಾದರಿಯಲ್ಲಿಯೇ ಈಗಾಗಲೇ ಕೇರಳದ ಕೊಚ್ಚಿಯಲ್ಲಿ, ಕ್ಯಾಶಿಯರ್ ಲೆಸ್ ಅಂಗಡಿಯನ್ನು ರಾಜೇಶ್ ಮಾಲಾಮಲ್ ಆರಂಭಿಸಿದ್ದಾರೆ.

ಕೊಚ್ಚಿಯ ಗೋಲ್ಡ್ ಸೌಕ್ ಗ್ರಾಂಡ್ ಮಾಲ್ ನಲ್ಲಿ ಈ ಔಟ್ ಲೆಟ್ ಆರಂಭಿಸಿರುವ ಅವರು, ಮುಂದಿನ ಮೂರು ತಿಂಗಳಲ್ಲಿ ಬೆಂಗಳೂರಿನಲ್ಲಿ ಕ್ಯಾಶ್ ಲೆಸ್, ಕೌಂಟರ್ ಲೆಸ್ ಔಟ್ ಲೆಟ್ ಆರಂಭಿಸಲು ನಿರ್ಧರಿಸಿದ್ದಾರೆ.

ಕೊಚ್ಚಿಯಲ್ಲಿರುವ ವಾಟಾಸೇಲ್ ಔಟ್ ಲೆಟ್ ನಲ್ಲಿ, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ವಿಶ್ವದ ವಿವಿಧ ಭಾಗದಲ್ಲಿ ಕೌಂಟರ್ ಲೆಸ್ ಔಟ್ ಲೆಟ್ ಆರಂಭಿಸಿದ್ದರೂ, ಅಲ್ಲಿ ಖರೀದಿಸಿದ ವಸ್ತುಗಳನ್ನು ಸ್ಕ್ಯಾನ್ ಮಾಡಬೇಕಿದೆ.

ಆದರೆ ಇಲ್ಲಿರುವ ಅತ್ಯಾಧುನಿಕ ಸೆನ್ಸಾರ್ ಹಾಗೂ ಮೇಲ್ಚಾವಣಿಯಲ್ಲಿ ಅಳವಡಿಸಿರುವ ಕ್ಯಾಮೆರಾಗಳಿಂದ ಗ್ರಾಹಕರು ಖರೀದಿಸಿದ ವಸ್ತುಗಳು ಸೆರೆಯಾಗಲಿದೆ. ಕೊನೆಯಲ್ಲಿ ಪಡೆದ ಎಲ್ಲ ವಸ್ತುಗಳ ಮೊತ್ತವನ್ನು ಒಗ್ಗೂಡಿಸಿ, ಇ-ವ್ಯಾಲೆಟ್ ನಿಂದ ಹಣ ಪಾವತಿಯಾಗಲಿದೆ ಎಂದು ರಾಜೇಶ್ ವಿವರಿಸಿದ್ದಾರೆ.

ಕಾರ್ಯಚರಣೆ ಹೇಗೆ?

ಸದ್ಯ 180 ವಸ್ತುಗಳನ್ನು ಈ ಔಟ್ ಲೆಟ್ ನಲ್ಲಿ ಇಡಲಾಗಿದೆ. ಗ್ರಾಹಕರು ಅಂಗಡಿ ಪ್ರವೇಶಿಸುವಾಗಲೇ, ಔಟ್ ಲೆಟ್ ಆ್ಯಪ್ ಹಾಕಿಕೊಂಡು, ಅದರಲ್ಲಿ ವೈಯಕ್ತಿಕ ಮಾಹಿತಿ ನೀಡಿದರೆ, ಕ್ಯೂಆರ್ ಕೋಡ್ ಸಿಗಲಿದೆ. ಈ ಕೋಡ್ ಬಳಸಿಕೊಂಡು, ಅಂಗಡಿ ಪ್ರವೇಶಿಸಿದರೆ, ಗ್ರಾಹಕರು ಪಡೆದ ಎಲ್ಲ ವಸ್ತುಗಳ ಬಗ್ಗೆ ಗ್ರಾಹಕರ ಖಾತೆಗೆ ಮಾಹಿತಿ ರವಾನೆಯಾಗಲಿದೆ.

ಬಳಿಕ ಮತ್ತೊಮ್ಮೆ ಕ್ಯೂಆರ್ ಕೋಡ್ ನಿಂದ ನಿರ್ಗಮಿಸಿದರೆ, ಖರೀದಿಸಿದ ಎಲ್ಲ ವಸ್ತುಗಳ ಒಟ್ಟು ಮೌಲ್ಯ ಮಾಡಿ, ಇ-ವ್ಯಾಲೆಟ್ ನಿಂದ ಹಣ ಕಟ್ ಆಗಲಿದೆ ಎಂದು ವಿವರಿಸಿದ್ದು, ಬೆಂಗಳೂರಿನ ಔಟ್ ಲೆಟ್ ನಲ್ಲಿ ಮತ್ತಷ್ಟು ವಸ್ತುಗಳ ಸೇರ್ಪಡೆ ಮಾಡಲಾಗುವುದು ಎಂದು ಸಂಸ್ಥೆ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...