alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ಎಟಿಎಂನಲ್ಲಿ ನಕಲಿ ನೋಟು ಪತ್ತೆ

another-atm-in-delhi-dispenses-fake-rs-2000-noteಕೆಲ ದಿನಗಳ ಹಿಂದಷ್ಟೇ ದೆಹಲಿಯ ಸಂಗಮ್ ವಿಹಾರ್ ನಲ್ಲಿ ಎಟಿಎಂ ನಿಂದ ಹಣ ಡ್ರಾ ಮಾಡಿದ್ದ ರೋಹಿತ್ ಕುಮಾರ್ ಎಂಬವರಿಗೆ ನಕಲಿ 2000 ರೂ. ನೋಟುಗಳು ಸಿಕ್ಕಿದ್ದವು. ಮೊದಲಿಗೆ ಅವರ ಮಾತನ್ನು ನಂಬದ ಪೊಲೀಸ್ ಅಧಿಕಾರಿಯೊಬ್ಬರು ಅದೇ ಎಟಿಎಂ ನಲ್ಲಿ ಹಣ ಡ್ರಾ ಮಾಡಿದಾಗ ಅವರಿಗೂ ನಕಲಿ ನೋಟು ಸಿಕ್ಕ ಬಳಿಕ ರೋಹಿತ್ ಕುಮಾರ್ ಹೇಳಿದ್ದು, ಸತ್ಯ ಎಂಬುದು ಮನವರಿಕೆಯಾಗಿತ್ತು.

ಇದೀಗ ದೆಹಲಿಯ ಮತ್ತೊಂದು ಎಟಿಎಂನಲ್ಲಿ 2000 ರೂ. ನಕಲಿ ನೋಟು ಬಂದಿದೆ. ದಕ್ಷಿಣ ದೆಹಲಿಯ ಅಮರ್ ಕಾಲೋನಿಯಲ್ಲಿರುವ ಎಟಿಎಂ ನಲ್ಲಿ ಚಂದನ್ ಎಂಬವರು ಹಣ ಡ್ರಾ ಮಾಡಿದ ವೇಳೆ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಬದಲಿಗೆ ‘ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮುದ್ರಣವಾಗಿದ್ದ ನೋಟು ಸಿಕ್ಕಿದೆ. ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಮರ್ ಕಾಲೋನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಕ್ರೈಂ ಬ್ರಾಂಚ್ ಗೆ ವರ್ಗಾಯಿಸಲಾಗಿದ್ದು, ಖಾಸಗಿ ಬ್ಯಾಂಕ್ ಗೆ ಸೇರಿದ್ದ ಈ ಎಟಿಎಂಗೆ ಹಣ ಹಾಕಿದ್ದ ಏಜೆನ್ಸಿಯವರ ಮಾಹಿತಿ ಕಲೆ ಹಾಕಲಾಗುತ್ತಿದೆ. ಎಟಿಎಂಗಳಲ್ಲೇ ನಕಲಿ 2000 ರೂ. ನೋಟುಗಳು ಬರುತ್ತಿರುವುದು ಆತಂಕದ ವಿಷಯವಾಗಿದ್ದು, ಗ್ರಾಹಕರು ಎಟಿಎಂಗಳಿಂದ ಹಣ ಪಡೆದ ವೇಳೆ ಅವುಗಳನ್ನು ಸ್ಥಳದಲ್ಲಿಯೇ ಪರಿಶೀಲಿಸುವುದು ಸೂಕ್ತ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...