alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಕುರಿತು ಬಹಿರಂಗವಾಗಿದೆ ಮತ್ತೊಂದು ಶಾಕಿಂಗ್ ಸಂಗತಿ

ಆಂಧ್ರಪ್ರದೇಶ ಸರ್ಕಾರದ ವೆಬ್ ಸೈಟ್ ಒಂದರಲ್ಲಿ ಆಧಾರ್ ಸಂಖ್ಯೆಯಿಂದಾಗಿ ಹಿಂದುಳಿದ ಜನಾಂಗಕ್ಕೆ ಸೇರಿದ ಕುಟುಂಬಗಳ ಸಂಪೂರ್ಣ ವಿವರ ಸೋರಿಕೆಯಾಗುತ್ತಿದೆ. ವೆಬ್ ಸೈಟ್ ನಲ್ಲಿ ಕಾಸ್ಟ್ ಅಥವಾ ರಿಲಿಜನ್ ಎಂದು ಸರ್ಚ್ ಮಾಡಿದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಕುಟುಂಬಗಳ ವಿಳಾಸ ಸಹ ದೊರೆಯುತ್ತಿದೆ.

Huffpost Indiaದ ಅಮನ್ ಸೇಥಿ ಎಂಬುವವರು ಈ ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದ್ದಾರೆ. ವೆಬ್ ಸೈಟ್ ನಲ್ಲಿರೋ ಡೇಟಾ ಬೇಸ್ ಅಪ್ಡೇಟ್ ಆದಂತೆ, ಜನರ ಡೇಟಾ ಸೆಕ್ಯೂರಿಟಿ ಆತಂಕ ಕೂಡ ಹೆಚ್ಚುತ್ತಲೇ ಇದೆ ಅಂತಾ ಹೇಳಿದ್ದಾರೆ.

ಸರ್ಕಾರದ ಸಬ್ಸಿಡಿ ಯೋಜನೆ ಪಡೆದವರ ವಿವರ ಇದರಲ್ಲಿದೆ. ಡ್ಯಾಶ್ ಬೋರ್ಡ್ ನಲ್ಲಿ ಫಲಾನುಭವಿಗಳ ಆಧಾರ್ ಸಂಖ್ಯೆಯನ್ನು ಬಳಸಿಕೊಳ್ಳಲಾಗಿದೆ. ಅವರ ಫೋನ್ ನಂಬರ್, ಬ್ಯಾಂಕ್ ಖಾತೆ ವಿವರ, ಐ ಎಫ್ ಎಸ್ ಸಿ ಕೋಡ್, ಎಲ್ಲಾ ವಿವರಗಳನ್ನು ಯಾರು ಬೇಕಾದ್ರೂ ಪಡೆದುಕೊಳ್ಳಬಹುದಾಗಿದೆ.

ಅಮಿತ್ ಸೇಥಿ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದ ಬಳಿಕ ಫಲಾನುಭವಿಗಳ ಆಧಾರ್ ಸಂಖ್ಯೆಯನ್ನು ಮಾಸ್ಕ್ ಮಾಡಲಾಗಿದೆಯಂತೆ. ಆದ್ರೂ 50 ಲಕ್ಷ ಜನರ ಫೋನ್ ನಂಬರ್ ಗಳನ್ನು ಯಾರು ಬೇಕಾದ್ರೂ ಪಡೆಯಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...