alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಬಳಸುವ ಮುನ್ನ ಎಚ್ಚರ

ಮೊಬೈಲ್ ಹಾಗೂ ಡಿಜಿಟಲ್ ಜಗತ್ತಿನಲ್ಲಿ ಆಪತ್ತು ಯಾವ ಬಾಗಿಲಿನಿಂದ ಬರುತ್ತೆ ಅನ್ನೋದನ್ನು ಹೇಳೋದು ಅಸಾಧ್ಯ. ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಸೇರಿದಂತೆ ಮೊಬೈಲ್ ಹಾಗೂ ಆನ್ಲೈನ್ ಮೂಲಕ ಹಣದ ವ್ಯವಹಾರ ನಡೆಸುವ ವೇಳೆ ಬಹಳಷ್ಟು ಎಚ್ಚರ ವಹಿಸಬೇಕಾಗುತ್ತದೆ.

ಗ್ಲೋಬಲ್ ಐಟಿ ಸೆಕ್ಯೂರಿಟಿ ಕಂಪನಿ ಕ್ವಿಕ್ ಹೀಲ್ ಆತಂಕಕಾರಿ ವಿಷ್ಯವನ್ನು ಹೇಳಿದೆ. ಆಂಡ್ರಾಯ್ಡ್ ಬ್ಯಾಂಕಿಂಗ್ ಟ್ರೋಜನ್ ಹಿಡಿತದಲ್ಲಿದೆಯಂತೆ. ಹೆಚ್ ಡಿ ಎಫ್ ಸಿ, ಐಸಿಐಸಿಐ, ಎಸ್ ಬಿ ಐ ಸೇರಿದಂತೆ ಸುಮಾರು 232 ಬ್ಯಾಂಕುಗಳ ಆ್ಯಪ್ ಅಪಾಯದಲ್ಲಿದೆಯಂತೆ.

‘Android.banker.A2f8a ಹೆಸರಿನ ಅಪಾಯಕಾರಿ ಟ್ರೋಜನ್ ಬಳಕೆದಾರರ ಮೊಬೈಲ್ ತಲುಪುತ್ತದೆ. ಮೊಬೈನಲ್ಲಿ ಮುಖ್ಯವಾಗಿ ಬ್ಯಾಂಕಿಂಗ್ ಗೆ ಸಂಬಂಧಿಸಿದ ಮಾಹಿತಿಯನ್ನು ಹುಡುಕುವ ಪ್ರಯತ್ನ ಮಾಡುತ್ತದೆ. ನಕಲಿ ಸೂಚನೆಯೊಂದನ್ನು ರವಾನೆ ಮಾಡಿ ಪಾಸ್ವರ್ಡ್ ಹಾಗೂ ಲಾಗಿನ್ ಮಾಹಿತಿ ಪಡೆಯುವ ಹ್ಯಾಕರ್ಸ್ ನಂತ್ರ ಸುಲಭವಾಗಿ ಬ್ಯಾಂಕಿನ ಮಾಹಿತಿ ಪಡೆಯುತ್ತಾರೆ.

ನಕಲಿ ಎಸ್ ಎಂ ಎಸ್ ಹಾಗೂ ಮೇಲ್ ಗೆ ಯಾವುದೇ ಪ್ರತಿಕ್ರಿಯೆ ನೀಡಬೇಡಿ ಎಂದು ಈಗಾಗಲೇ ಎಲ್ಲ ಗ್ರಾಹಕರಿಗೆ ಕ್ವಿಕ್ ಹೀಲ್ ಸೂಚನೆ ನೀಡಿದೆ. ನಕಲಿ ಆ್ಯಪ್ ಗಳನ್ನು ಡೌನ್ಲೋಡ್ ಮಾಡುವ ಬದಲು ಭದ್ರತೆಯಿರುವ ಆ್ಯಪ್ ಗಳನ್ನು ಮಾತ್ರ ಬಳಸಿ ಎಂದು ಕ್ವಿಕ್ ಹೀಲ್ ಸಲಹೆ ನೀಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...