alex Certify
ಕನ್ನಡ ದುನಿಯಾ       Mobile App
       

Kannada Duniya

ನೋಕಿಯಾ 3 ಸ್ಮಾರ್ಟ್ಫೋನ್ ಮಾರಾಟ ಶುರು

download

ನೋಕಿಯಾ ಪ್ರಿಯರಿಗೊಂದು ಖುಷಿ ಸುದ್ದಿ. ಈಗಾಗ್ಲೇ ನೋಕಿಯಾ 3 ಸ್ಮಾರ್ಟ್ಫೋನ್ ಮಾರಾಟ ಶುರುವಾಗಿದೆ. ಆಪ್ಲೈನ್ ಮಾರುಕಟ್ಟೆಯಲ್ಲಿ ನೋಕಿಯಾ 3 ಮೊಬೈಲ್ ಲಭ್ಯವಾಗ್ತಾ ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 9499 ರೂಪಾಯಿಗೆ ಮಾರಾಟವಾಗ್ತಿರುವ ಈ ಮೊಬೈಲ್ ಗೆ ಸಾಕಷ್ಟು ಕೊಡುಗೆಗಳನ್ನು ನೀಡಲಾಗ್ತಾ ಇದೆ.

ನೋಕಿಯಾ ಸ್ಮಾಟ್ಫೋನ್ 3 ಖರೀದಿ ಮಾಡಿದ ವೊಡಾಫೋನ್ ಗ್ರಾಹಕರಿಗೆ 149 ರೂಪಾಯಿಗೆ ಪ್ರತಿ ತಿಂಗಳು 5ಜಿಬಿ 4ಜಿ ಡೇಟಾ ಲಭ್ಯವಾಗಲಿದೆ. ಇದ್ರ ಜೊತೆಗೆ ಮೇಕ್ಮೈಟ್ರಿಪ್ ನ 2500 ರೂಪಾಯಿ ಬೌಚರ್ ಕೂಡ ಸಿಗಲಿದೆ. ಜೂನ್ 13ರಂದು ನೋಕಿಯಾ ಹಾಗೂ ಹೆಚ್ ಎಂ ಟಿ ಗ್ಲೋಬಲ್ ಭಾರತದಲ್ಲಿ ನೋಕಿಯಾ 3, ನೋಕಿಯಾ 5 ಹಾಗೂ ನೋಕಿಯಾ 6 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ.

ಮೂರು ಸ್ಮಾರ್ಟ್ಫೋನ್ ಗಳಲ್ಲಿ ನೋಕಿಯಾ 3 ಸ್ಮಾರ್ಟ್ಫೋನ್ ಬೆಲೆ ಕಡಿಮೆ ಇದೆ. 16 ಜಿಬಿ ಇಂಟರ್ನಲ್ ಸ್ಟೋರೇಜ್ ಜೊತೆಗೆ 2ಜಿಬಿ ರ್ಯಾಮ್ ಸಿಗಲಿದೆ. ನೋಕಿಯಾ 3 ಸ್ಮಾರ್ಟ್ಫೋನ್ ಆಪ್ಲೈನ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ನೋಕಿಯಾ 5 ಸ್ಮಾರ್ಟ್ಫೋನ್ ಕೂಡ ಆಪ್ಲೈನ್ ಮಾರುಕಟ್ಟೆಯಲ್ಲಿ ಸಿಗಲಿದೆ. ನೋಕಿಯಾ 6 ಸ್ಮಾರ್ಟ್ಫೋನ್ ಮಾತ್ರ ಆನ್ಲೈನ್ ನಲ್ಲಿ ಸಿಗಲಿದ್ದು, ನೋಕಿಯಾ 5 ಸ್ಮಾರ್ಟ್ಫೋನ್ ಮಾರಾಟ ಜುಲೈ 7ರಿಂದ ಶುರುವಾಗಲಿದೆ. ನೋಕಿಯಾ 6 ಸ್ಮಾರ್ಟ್ಫೋನ್ ಮಾರಾಟ ಜುಲೈ 14ರಿಂದ ಶುರುವಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...