alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಾಹನ ಖರೀದಿಸುವವರಿಗೆ ಸಿಗ್ತಿದೆ ಭಾರೀ ರಿಯಾಯಿತಿ

ಆಂಧ್ರ ಪ್ರದೇಶ ಸರ್ಕಾರ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಹೊಸ ಯೋಜನೆ ಕೈಗೊಂಡಿದೆ. ಈ ಪ್ರಕಾರ ಎಲೆಕ್ಟ್ರಿಕ್ ವಾಹನ ಖರೀದಿಸಿದಲ್ಲಿ ರಸ್ತೆ ತೆರಿಗೆ ಮತ್ತು ವಾಹನಗಳ ನೋಂದಣಿ ಶುಲ್ಕವನ್ನು ಸಂಪೂರ್ಣ ಮರು ಪಾವತಿಸುವುದಾಗಿ ತಿಳಿಸಿದೆ.

ಈ ಸಂಬಂಧ ಆಂಧ್ರ ಪ್ರದೇಶದ ಕ್ಯಾಬಿನೆಟ್ ನಲ್ಲಿ ಎಲೆಕ್ಟ್ರಿಕ್ ಮೊಬೈಲ್ ನೀತಿಯನ್ನು ಜಾರಿಗೆ ತಂದಿದೆ. ಇದಕ್ಕಾಗಿ ಸುಮಾರು 30 ಸಾವಿರ ಕೋಟಿ ಹಣ ವ್ಯಯಿಸಲಾಗ್ತಿದ್ದು, ಈ ಮೂಲಕ ಕಾರು ತಯಾರಕರು, ಬ್ಯಾಟರಿ ತಯಾರಕರಿಗೆ ಹಣಕಾಸಿನ ಪ್ರೋತ್ಸಾಹ ನೀಡಲಿದೆ.

ಹಾಗೆಯೇ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಎಲ್ಲಾ ಶುಲ್ಕ ಮರು ಪಾವತಿಸಲಾಗುತ್ತದೆ. ಅಲ್ಲದೆ ಐದು ವರ್ಷದೊಳಗೆ ಸುಮಾರು 10 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಗುರಿ ಹೊಂದಲಾಗಿದೆ.

ಇದರ ಜೊತೆಗೆ ಮೊದಲ ಎರಡು ಕಾರು ಉತ್ಪಾದನಾ ಸಂಸ್ಥೆಗಳಿಗೆ ಶೇಕಡಾ 10 ಪರ್ಸೆಂಟ್ ಸಬ್ಸಿಡಿ ನೀಡಲಾಗುವುದು. ಹಾಗೆಯೇ ಭೂಮಿ ಗುತ್ತಿಗೆ ವೇಳೆ ರಾಜ್ಯ ಜಿ ಎಸ್ ಟಿ ಮತ್ತು ಸ್ಟಾಂಪ್ ಸುಂಕವನ್ನು ಮರುಪಾವತಿಸಲಾಗುವುದು. ಅಲ್ಲದೆ ಎಲೆಕ್ಟ್ರಿಕ್ ಕಾರು ಉತ್ಪಾದನಾ ಸಂಸ್ಥೆಗಳಿಗೆ ವಿದ್ಯುತ್ ಹಾಗೂ ನೀರಿನ ಸುಂಕದ ರಿಯಾಯಿತಿ ಕೂಡಾ ನೀಡಲಾಗುವುದು ಎಂದು ಆಂಧ್ರ ಕ್ಯಾಬಿನೆಟ್ ತಿಳಿಸಿದೆ.

2024 ರ ವೇಳೆಗೆ ಆಂಧ್ರ ಪ್ರದೇಶದ ನಾಲ್ಕು ನಗರಗಳಲ್ಲಿ, ಈಗಿರುವ ಬಸ್ ಗಳನ್ನು ಎಲೆಕ್ಟ್ರಿಕಲ್ ಬಸ್ ಗಳಾಗಿ ಪರಿವರ್ತಿಸಲು ಚಿಂತಿಸಲಾಗಿದೆ. ಹಾಗೆಯೇ 2030ರ ಹೊತ್ತಿಗೆ ಇಡೀ ರಾಜ್ಯದಲ್ಲಿ ಎಲ್ಲೆಡೆಯೂ ಎಲೆಕ್ಟ್ರಿಕ್ ಬಸ್ ಗಳು ಸಂಚರಿಸಲಿವೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...