alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತು ‘ಆಧಾರ್’ ಕುರಿತ ಆಘಾತಕಾರಿ ಮಾಹಿತಿ

ನವದೆಹಲಿ: ಆಧಾರ್ ಮಾಹಿತಿ ಕೇವಲ 500 ರೂ. ಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂಬ ಸುದ್ದಿ ಇತ್ತೀಚೆಗಷ್ಟೇ ಹಲ್ ಚಲ್ ಎಬ್ಬಿಸಿತ್ತು. ಇದಕ್ಕಾಗಿ ವರ್ಚುಯಲ್ ಐಡಿ ಕಾನ್ಸೆಪ್ಟ್ ಪರಿಚಯಿಸಲಾಗಿದೆ. ಇದರ ನಡುವೆಯೇ ಮತ್ತೊಂದು ಆಘಾತಕಾರಿ ಸಂಗತಿಯನ್ನು ಆನ್ ಲೈನ್ ಸಂಶೋಧಕರೊಬ್ಬರು ಬಯಲು ಮಾಡಿದ್ದಾರೆ.

ಆಧಾರ್ ಮಾಹಿತಿಗಳನ್ನು ಹ್ಯಾಕ್ ಮಾಡಿ ಸುಲಭವಾಗಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ. ಫ್ರೆಂಚ್ ಭದ್ರತಾ ಸಂಶೋಧಕ ಎಲಿಯಟ್ ಅಂಡರ್ಸನ್, ಯು.ಐ.ಡಿ.ಎ.ಐ.ನಿಂದ ಬಿಡುಗಡೆ ಮಾಡಿದ ಮತ್ತು ಅಭಿವೃದ್ಧಿಪಡಿಸಲಾದ ಆಧಾರ್ ಅಧಿಕೃತ ಅಪ್ಲಿಕೇಷನ್ ಹ್ಯಾಕ್ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ. ಆಧಾರ್ ಸುರಕ್ಷತಾ ವಿಧಾನಗಳು ಅಷ್ಟು ಕಳಪೆಯಾಗಿವೆ ಎಂಬುದು ಎಲಿಯಟ್ ನೀಡಿದ ಮಾಹಿತಿಗಳಿಂದ ಗೊತ್ತಾಗಿದೆ.

ಎಂ ಆಧಾರ್(ಆಧಾರ್ ಅಧಿಕೃತ ಅಂಡ್ರಾಯಿಡ್ ಅಪ್ಲಿಕೇಷನ್) ಕಳಪೆಯಾದ ಭದ್ರತಾ ಮಾನದಂಡಗಳನ್ನು ಹೊಂದಿದ್ದು, ಗಮನಸೆಳೆದಿದೆ. ಭದ್ರತಾ ಸಂಶೋಧಕರು ಪಾಸ್ ವರ್ಡ್ ಅನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಸಾಮಾನ್ಯವಾಗಿ 123456789 ಬಹುತೇಕರ ಪಾಸ್ ವರ್ಡ್ ಆಗಿರುತ್ತದೆ.(ಇದು 2017 ರಲ್ಲಿ 6 ನೇ ವರ್ಸ್ಟ್ ಪಾಸ್ ವರ್ಡ್ ಆಗಿದೆ)

ಆಧಾರ್ ಮಾಹಿತಿ ದತ್ತಾಂಶಗಳನ್ನು ಬಯೋಮೆಟ್ರಿಕ್ ಆಧಾರದಲ್ಲಿ ಸ್ಥಳೀಯವಾಗಿ ಪಾಸ್ ವರ್ಡ್ ಕೊಟ್ಟು ಸಂಗ್ರಹಿಸಲಾಗಿರುತ್ತದೆ. ಇದಕ್ಕಾಗಿ ಸುಲಭವಾದ ಪಾಸ್ ವರ್ಡ್ ಗಳನ್ನು ಕೊಟ್ಟಿದ್ದಲ್ಲಿ ಅದನ್ನು ಹ್ಯಾಕ್ ಮಾಡುವ ಸಾಧ್ಯತೆ ಇರುತ್ತದೆ ಎಂದು ಎಲಿಯಟ್ ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...