alex Certify
ಕನ್ನಡ ದುನಿಯಾ       Mobile App
       

Kannada Duniya

2 ಲಕ್ಷ ರೂಪಾಯಿಗೆ ಶುರುಮಾಡಿ ಈ ಬ್ಯುಸಿನೆಸ್

ಬೇರೆಯವರ ಕೈ ಕೆಳಗೆ ದುಡಿದು ಅಲ್ಪ ಸ್ವಲ್ಪ ಹಣ ಸಂಪಾದನೆ ಮಾಡುವುದಕ್ಕಿಂತ ಸ್ವಂತ ಬ್ಯುಸಿನೆಸ್ ಉತ್ತಮ ಎನ್ನುವವರಿದ್ದಾರೆ. ಬ್ಯುಸಿನೆಸ್ ಮಾಡುವ ಆಸಕ್ತಿ ಅನೇಕರಿಗಿರುತ್ತದೆ. ಆದ್ರೆ ಯಾವ ಬ್ಯುಸಿನೆಸ್ ಶುರುಮಾಡಬೇಕೆಂಬ ಗೊಂದಲ ಕಾಡುತ್ತದೆ. ಡೈರಿ ಉತ್ಪನ್ನದಲ್ಲಿ ಹೆಸರುವಾಸಿಯಾಗಿರುವ ಅಮೂಲ್ ಫ್ರಾಂಚೈಸಿ ಪಡೆಯುವುದು ಲಾಭದಾಯಕ ಬ್ಯುಸಿನೆಸ್ ನಲ್ಲಿ ಒಂದು.

ಅಮೂಲ್ ಉತ್ಪನ್ನದ ಫ್ರಾಂಚೈಸಿ ಪಡೆಯುವುದು ಸುಲಭ. ಇದ್ರಲ್ಲಿ ಲಾಭ ಕೂಡ ಪಡೆಯಬಹುದು. ಆದ್ರೆ ಅದ್ರ ಬಗ್ಗೆ ಸಂಪೂರ್ಣ ತಿಳಿದುಕೊಳ್ಳದೆ ಬ್ಯುಸಿನೆಸ್ ಶುರುಮಾಡುವುದು ಮೂರ್ಖತನವಾಗುತ್ತದೆ. ಆದ್ರೆ ಅನುಭವದ ಅವಶ್ಯಕತೆಯಿಲ್ಲ. ಮಾರ್ಕೆಟಿಂಗ್ ಬಗ್ಗೆ ಜ್ಞಾನವಿದ್ದರೆ ಸಾಕು.

ಅಮೂಲ್ ಗೆ ಸಾಕಷ್ಟು ಗ್ರಾಹಕರಿದ್ದಾರೆ. ಎಲ್ಲ ನಗರಗಳಲ್ಲೂ ಅಮೂಲ್ ಉತ್ಪನ್ನಕ್ಕೆ ಬೇಡಿಕೆಯಿದೆ. ಹಾಗಾಗಿ ಅಮೂಲ್ ಉತ್ಪನ್ನದ ವ್ಯವಹಾರ ಶುರುಮಾಡಿದ್ರೆ ನಷ್ಟವಾಗುತ್ತೆ ಎಂಬ ಭಯ ಬೇಡ.

ಅಮೂಲ್ ಎರಡು ರೀತಿಯ ಫ್ರಾಂಚೈಸಿ ನೀಡುತ್ತದೆ. ಅಮೂಲ್ ಔಟ್ಲೆಟ್ ಹಾಗೂ ರೈಲ್ವೆ ಪಾರ್ಲರ್ ಗೆ 2 ಲಕ್ಷ ರೂಪಾಯಿ ಖರ್ಚಾಗುತ್ತದೆ. ಅಮೂಲ್ ಐಸ್ಕ್ರೀಂ ಸ್ಕೂಪಿಂಗ್ ಪಾರ್ಲರ್ ತೆಗೆಯಲು ನಿರ್ಧರಿಸಿದ್ದರೆ 6 ಲಕ್ಷ ರೂಪಾಯಿ ವೆಚ್ಛ ಮಾಡಬೇಕಾಗುತ್ತದೆ. ಇದಕ್ಕೆ ನಿಮಗೆ ಸಾಲ ಸಿಗಲಿದೆ. ಅಮೂಲ್ ಪ್ರಕಾರ ನೀವು ತಿಂಗಳಿಗೆ 5-10 ಲಕ್ಷ ರೂಪಾಯಿ ಬ್ಯುಸಿನೆಸ್ ಮಾಡಬಹುದಂತೆ. ಆದ್ರೆ ನೀವು ಯಾವ ಸ್ಥಳದಲ್ಲಿ ಅಮೂಲ್ ಪಾರ್ಲರ್ ತೆರೆಯುತ್ತೀರಿ ಎಂಬುದನ್ನು ಅವಲಂಬಿಸಿರುತ್ತದೆ. ಪಾರ್ಲರ್ ತೆಗೆಯಲು 150 ಚದರ ಅಡಿ ಜಾಗ ಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...