alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರನ್ನು ಸೆಳೆಯಲು ಮಹತ್ವದ ಹೆಜ್ಜೆಯಿಟ್ಟ ಅಮೆಜಾನ್

ಅಮೆಜಾನ್ ಇಂಡಿಯಾ ಮತ್ತಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯಲು ಮಹತ್ವದ ಹೆಜ್ಜೆಯಿಟ್ಟಿದೆ. ಅಮೆಜಾನ್ ಇಂಡಿಯಾ ಆನ್ಲೈನ್ ಮಾರುಕಟ್ಟೆ ಇನ್ಮುಂದೆ ಹಿಂದಿ ಭಾಷೆಯಲ್ಲೂ ಲಭ್ಯವಾಗಲಿದೆ. ಮಂಗಳವಾರ ಅಮೆಜಾನ್ ಇಂಡಿಯಾ ಉಪಾಧ್ಯಕ್ಷ ಮನೀಷ್ ತಿವಾರಿ ಈ ವಿಷ್ಯವನ್ನು ತಿಳಿಸಿದ್ದಾರೆ.

ಅಮೆಜಾನ್ ಇಂಡಿಯಾ 10 ಕೋಟಿ ಗ್ರಾಹಕರನ್ನು ತನ್ನತ್ತ ಸೆಳೆಯುವ ಉದ್ದೇಶ ಹೊಂದಿದೆ. ಇದೇ ಕಾರಣಕ್ಕೆ ಹಿಂದಿ ಭಾಷೆಯಲ್ಲೂ ಆನ್ಲೈನ್ ವೆಬ್ಸೈಟ್ ಲಭ್ಯ ಮಾಡಲಿದೆ. ಗ್ರಾಹಕರು ವಸ್ತುಗಳ ಹೆಸ್ರು, ಬೆಲೆಯನ್ನು ಹಿಂದಿಯಲ್ಲಿ ನೋಡಬಹುದಾಗಿದೆ. ಇಷ್ಟೇ ಅಲ್ಲ ಖರೀದಿಯಿಂದ ಹಿಡಿದು ವಿಳಾಸ, ಹಣ ಪಾವತಿಯನ್ನೂ ಹಿಂದಿಯಲ್ಲೇ ಮಾಡಬಹುದು ಎಂದು ಮನೀಷ್ ಹೇಳಿದ್ದಾರೆ.

ಮೊದಲ ಬಾರಿ ಭಾರತೀಯ ಭಾಷೆಯಲ್ಲಿ ಅಮೆಜಾನ್ ಇಂಡಿಯಾ ಕೆಲಸ ಮಾಡಲಿದೆ. ಹಬ್ಬದ ಋತುವಿನಲ್ಲಿ ಗ್ರಾಹಕರನ್ನು ಸೆಳೆಯುವುದು ಅಮೆಜಾನ್ ಉದ್ದೇಶ. ಹಿಂದಿ ಭಾಷೆಯಲ್ಲಿ ದೀಪಾವಳಿ ವೇಳೆಗೆ ಅಮೆಜಾನ್ ಇಂಡಿಯಾ ವೆಬ್ಸೈಟ್ ಲಭ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...