alex Certify
ಕನ್ನಡ ದುನಿಯಾ       Mobile App
       

Kannada Duniya

ದಿನಸಿ ವಸ್ತುಗಳ ಮೇಲೆ ಅಮೆಜಾನ್ ನೀಡ್ತಿದೆ ಭರ್ಜರಿ ಆಫರ್

ಆನ್ಲೈನ್ ಮಾರುಕಟ್ಟೆ ಅಮೆಜಾನ್ ಇಂದು ತನ್ನ ಪ್ರೈಂ ಸೇಲ್ ನಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡ್ತಿದೆ. ಅಮೆಜಾನ್, ಇ ಕಾಮರ್ಸ್ ವೆಬ್ಸೈಟ್ ನಂತ್ರ ದಿನಸಿ ವಸ್ತುಗಳ ಮೇಲೆ ಗಮನ ನೀಡಿದೆ. ದಿನಸಿ ವಸ್ತುಗಳ ಮೇಲೆ ಶೇಕಡಾ 50 ರಷ್ಟು ರಿಯಾಯಿತಿ ನೀಡ್ತಿದೆ.

ಅಮೆಜಾನ್ ಇಂಡಿಯಾ ನಿರ್ದೇಶಕ ಸೌರಭ್ ಶ್ರೀವಾಸ್ತವ್ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ. ಜುಲೈ 16ರಂದು ಅಮೆಜಾನ್ ದಿನಸಿ ವಸ್ತುಗಳ ಮೇಲೆ ರಿಯಾಯಿತಿ ನೀಡಲಿದೆ ಎಂದು ಅವ್ರು ಹೇಳಿದ್ದಾರೆ. ಬೇಳೆ, ಸೌಂದರ್ಯ, ವೈಯಕ್ತಿಕ ಆರೈಕೆ, ಮಕ್ಕಳ ವಸ್ತು, ಡಿಟರ್ಜಂಟ್ ಸೇರಿದಂತೆ ಅನೇಕ ವಸ್ತುಗಳ ಮೇಲೆ ಶೇಕಡಾ 50ರಷ್ಟು ರಿಯಾಯಿತಿ ಸಿಗ್ತಿದೆ.

ಅಮೆಜಾನ್ ಈ ಆಫರನ್ನು ಅಮೆಜಾನ್ ಪ್ರೈಂ ಸದಸ್ಯರಿಗೆ ಮಾತ್ರ ನೀಡ್ತಿದೆ. ಸೇಲ್ ಸುಮಾರು 36 ಗಂಟೆಗಳ ಕಾಲ ನಡೆಯಲಿದೆ. ಈ ರಿಯಾಯಿತಿ ಜೊತೆ ಕಂಪನಿ FMCG ಉತ್ಪನ್ನಗಳನ್ನು ಖರೀದಿ ಮಾಡುವ ಗ್ರಾಹಕರಿಗೆ 2600 ರೂಪಾಯಿ ಕ್ಯಾಶ್ಬ್ಯಾಕ್ ಕೂಡ ನೀಡ್ತಿದೆ.

ಅಮೆಜಾನ್ ನೀಡಿರುವ ಈ ಆಫರ್ ಲಾಭ ಪಡೆಯಲು ಗ್ರಾಹಕರು ಮುಗಿಬೀಳುತ್ತಿದ್ದಾರೆ. ಆದ್ರೆ ಇದು ಸಾಮಾನ್ಯ ಕಿರಾಣಿ ಅಂಗಡಿ ಮಾಲೀಕರ ಮೇಲೆ ಪರಿಣಾಮ ಬೀರುತ್ತಿದೆ. ಅಮೆಜಾನ್ ಹೊಡೆತ ನೀಡ್ತಿದೆ. ಆದ್ರೆ ವಸ್ತುಗಳ ಮೇಲೆ ಯಾವುದೇ ರಿಯಾಯಿತಿ ನೀಡೋದಿಲ್ಲವೆಂದು ಅಂಗಡಿ ಮಾಲೀಕರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...