alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್… : 129 ರೂ.ಗೆ ಸಿಗಲಿದೆ ಅಮೆಜಾನ್ ಪ್ರೈಂ ಸದಸ್ಯತ್ವ

ಹೆಚ್ಚುತ್ತಿರುವ ಸ್ಪರ್ಧೆ ಹಿನ್ನೆಲೆಯಲ್ಲಿ ಅಮೆಜಾನ್ ಇಂಡಿಯಾ ಬಳಕೆದಾರರಿಗಾಗಿ ಭರ್ಜರಿ ಆಫರ್ ನೀಡಿದೆ. ಅಮೆಜಾನ್ ಪ್ರೈಂ ಅಡಿಯಲ್ಲಿ ಭಾರತೀಯ ಮಾರುಕಟ್ಟೆಗೆ ಹೊಸ ತಿಂಗಳ ಚಂದಾದಾರಿಕೆಯನ್ನು ಪರಿಚಯಿಸಿದೆ.

ಅಮೆಜಾನ್ ಪ್ರೈಂ ಸದಸ್ಯತ್ವ ಪಡೆಯದ ಗ್ರಾಹಕರು ತಿಂಗಳಿಗೆ 129 ರೂಪಾಯಿ ನೀಡಿ ತಿಂಗಳ ಚಂದಾದಾರರಾಗಬಹುದು. ಒಂದು ವರ್ಷಕ್ಕೆ 999 ರೂಪಾಯ ನೀಡಿ ಚಂದಾದಾರತ್ವ ಪಡೆಯಬಹುದು.

ಈ ಹಿಂದೆ ಅಮೆಜಾನ್ ಕೇವಲ ವರ್ಷದ ಚಂದಾದಾರತ್ವ ಮಾತ್ರ ನೀಡುತ್ತಿತ್ತು. ತಿಂಗಳ ಚಂದಾದಾರರಾಗುವ ಗ್ರಾಹಕರಿಗೆ ದಿನಾಂಕ ಮುಗಿಯಲು ಮೂರು ದಿನವಿರುವ ಮೊದಲು ಕಂಪನಿ ಮಾಹಿತಿ ನೀಡಲಿದೆ.ಮುಂದಿನ ತಿಂಗಳ ಹಣ ಪಾವತಿ ಮಾಡಿದ್ರೆ ಚಂದಾದಾರತ್ವ ಮುಂದುವರೆಯಲಿದೆ. ಹಣ ನೀಡದ ಚಂದಾದಾರತ್ವವನ್ನು ರದ್ದು ಕೂಡ ಮಾಡಬಹುದಾಗಿದೆ.

ಚಂದಾದಾರರಿಗೆ ಅಮೆಜಾನ್ ವಿಡಿಯೋ ಹಾಗೂ ಮ್ಯೂಸಿಕ್ ಕೂಡ ಸಿಗಲಿದೆ. ಅಮೆಜಾನ್ ಜುಲೈ 2016 ರಿಂದ ಅಮೆಜಾನ್ ಪ್ರೈಂ ಸೌಲಭ್ಯ ಶುರು ಮಾಡಲಿದೆ. ಆರಂಭದಲ್ಲಿ 499 ರೂಪಾಯಿಯಿದ್ದ ವಾರ್ಷಿಕ ಚಂದಾದಾರತ್ವ ಈಗ 999 ರೂಪಾಯಿಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...