alex Certify
ಕನ್ನಡ ದುನಿಯಾ       Mobile App
       

Kannada Duniya

ಜುಲೈ 16 ರಂದು ಶುರುವಾಗಲಿದೆ ಅಮೆಜಾನ್ ಪ್ರೈಂ ಡೇ ಸೇಲ್

ಇ-ಕಾಮರ್ಸ್ ವೆಬ್ಸೈಟ್ ಅಮೆಜಾನ್ ತನ್ನ ಎರಡನೇ ಪ್ರೈಂ ಡೇ ಸೇಲ್ ಗಾಗಿ ಎಲ್ಲ ತಯಾರಿ ನಡೆಸುತ್ತಿದೆ. ಜುಲೈ 16 ರಂದು ಮಧ್ಯಾಹ್ನ 12 ಗಂಟೆಗೆ ಸೇಲ್ ಶುರುವಾಗಲಿದೆ. ಜುಲೈ 17 ರ ಮಧ್ಯರಾತ್ರಿಯವರೆಗೆ ಸೇಲ್ ನಡೆಯಲಿದೆ. ಅಮೆಜಾನ್ ಪ್ರೈಂ ಸರ್ವಿಸ್ ಸಹಾಯದಿಂದ 17 ದೇಶಗಳಲ್ಲಿ ಈ ಸೇಲ್ ನಡೆಯಲಿದೆ.

ಆನ್ಲೈನ್ ಗ್ರಾಹಕರನ್ನು ತನ್ನತ್ತ ಸೆಳೆಯಲು ಅಮೆಜಾನ್ ಈ ಪ್ರೈಂ ಸೇಲ್ ನಡೆಸಲಿದೆ. ವಸ್ತುಗಳ ಮೇಲೆ ಅಮೆಜಾನ್ ಈ ಸೇಲ್ ನಲ್ಲಿ ಭರ್ಜರಿ ಕೊಡುಗೆ ನೀಡಲಿದೆ. ಸಾಮಾನ್ಯರು ಈ ಸೇಲ್ ಲಾಭ ಪಡೆಯಬೇಕಾದಲ್ಲಿ ಪ್ರೈಂ ಸದಸ್ಯತ್ವ ಪಡೆಯಬೇಕು. 129 ರೂಪಾಯಿಗೆ ಕೂಡ ನೀವು ಒಂದು ತಿಂಗಳ ಪ್ರೈಂ ಸದಸ್ಯತ್ವ ಪಡೆಯಬಹುದು. ಸದಸ್ಯತ್ವ ಸಿಕ್ಕ ನಂತ್ರ ನೀವು ವಿಡಿಯೋ ಹಾಗೂ ಶೋ ಗಳನ್ನು ಕೂಡ ವೀಕ್ಷಣೆ ಮಾಡಬಹುದು.

ಅಮೆಜಾನ್ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಬಹುದು. ಇದ್ರ ಮೂಲಕ ಡೀಲ್ ಹಾಗೂ ಕೊಡುಗೆ ಬಗ್ಗೆ ಸುಲಭವಾಗಿ ತಿಳಿಯಬಹುದು.

ಅಮೆಜಾನ್ ಆ್ಯಪನ್ನು ನೀವು ಡೆಸ್ಕ್ ಟಾಪ್ ನಲ್ಲಿ ಕೂಡ ಡೌನ್ಲೋಡ್ ಮಾಡಬಹುದು. ಅಲ್ಲಿಯೂ ನಿಮಗೆ ಹೆಚ್ಚಿನ ಮಾಹಿತಿ ಸಿಗಲಿದೆ.

ಪ್ರೈಂ ಆ್ಯಪ್ ಕೂಡ ಲಭ್ಯವಿದೆ. ಇದ್ರ ಮೂಲಕ ಡಿಲೆವರಿ ಬಗ್ಗೆ ಸುಲಭವಾಗಿ ಮಾಹಿತಿ ಪಡೆಯಬಹುದು. 2 ಗಂಟೆಯೊಳಗೆ ನೀವು ಆರ್ಡರ್ ಮಾಡಿದ ವಸ್ತು ನಿಮ್ಮ ಕೈ ಸೇರಿರುತ್ತದೆ. ಆದ್ರೆ ಇದ್ರಲ್ಲಿ ಆಯ್ಕೆಗಳು ಕಡಿಮೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...