alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ರೀಚಾರ್ಜ್ ಮೇಲೆ ‘ಕ್ಯಾಶ್ ಬ್ಯಾಕ್ ಆಫರ್’ ಪಡೆಯೋದೇಗೆ…?

ಭಾರತದಲ್ಲಿ ಮೊಬೈಲ್ ಬಳಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. IAMAI ವರದಿ ಪ್ರಕಾರ 2016ರಲ್ಲಿ ಮೊಬೈಲ್ ಸೇವೆಗಳಿಗಾಗಿ ಜನರು ತಿಂಗಳಿಗೆ ತಲಾ 349 ರೂಪಾಯಿ ಖರ್ಚು ಮಾಡಿದ್ದಾರಂತೆ. ಮೊಬೈಲ್ ಸೇವೆಗಾಗಿ ಖರ್ಚು ಮಾಡಿರೋ ಒಟ್ಟಾರೆ ಹಣದಲ್ಲಿ ಶೇ.67ರಷ್ಟು ಪಾಲು 15-24 ವರ್ಷದೊಳಗಿನವರದ್ದಾಗಿದೆ.

50 ವರ್ಷಕ್ಕಿಂತ ಮೇಲ್ಪಟ್ಟವರು ಡೇಟಾಗಾಗಿ ಹೆಚ್ಚು ಹಣ ವೆಚ್ಚ ಮಾಡಿಲ್ಲ. ಎಸ್ ಎಂ ಎಸ್ ಮತ್ತು ಕರೆಗಳಿಗಾಗಿ ವ್ಯಯಿಸಿದ್ದಾರೆ. ಹಾಗಾಗಿ ಮೊಬೈಲ್ ಈಗ ಜೀವನಾವಶ್ಯಕ ವಸ್ತುವಿನಂತಾಗಿಬಿಟ್ಟಿದೆ. ಸದ್ಯ ಗ್ರಾಹಕರಿಗಾಗಿ ಅಮೆಜಾನ್ ಪೇ, ಮೊಬಿಕ್ವಿಕ್ ಮತ್ತು ಪೇಟಿಎಂ ಭರ್ಜರಿ ಆಫರ್ ನೀಡುತ್ತಿವೆ.

ಅಮೆಜಾನ್ ಪೇ : ಡಿಸೆಂಬರ್ 26ರಿಂದ ಡಿಸೆಂಬರ್ 31ರೊಳಗೆ ರೀಚಾರ್ಜ್ ಮಾಡಿದ್ರೆ ಶೇ.50ರಷ್ಟು ಕ್ಯಾಶ್ ಬ್ಯಾಕ್ ಆಫರ್ ಇದೆ. ಗರಿಷ್ಠ ಕ್ಯಾಶ್ ಬ್ಯಾಕ್ ಮೊತ್ತ 100 ರೂಪಾಯಿ. ರೀಚಾರ್ಜ್ ಮಾಡಿಸಿ 3 ದಿನಗಳೊಳಗಾಗಿ ಕ್ಯಾಶ್ ಬ್ಯಾಕ್ ಮೊತ್ತ ಅಮೆಜಾನ್ ಪೇ ಬ್ಯಾಲೆನ್ಸ್ ಗೆ ಆ್ಯಡ್ ಆಗುತ್ತದೆ. ಜಿಯೋ ಗ್ರಾಹಕರಿಗೆ 399 ರೂ. ರೀಚಾರ್ಜ್ ಮೇಲೆ 99 ರೂ. ಕ್ಯಾಶ್ ಬ್ಯಾಕ್ ಸಿಗಲಿದೆ. ಮೊದಲ ಗ್ರಾಹಕರಿಗೆ ಮಾತ್ರ ಈ ಆಫರ್ ಲಭ್ಯ.

ಮೊಬಿಕ್ವಿಕ್ : ವೆಬ್ ಸೈಟ್ ಅಥವಾ ಮೊಬಿಕ್ವಿಕ್ ಆ್ಯಪ್ ಮೂಲಕ 10 ರೂ. ಅಥವಾ ಅದಕ್ಕಿಂತ ಹೆಚ್ಚು ರೀಚಾರ್ಜ್ ಮಾಡಿದ್ರೆ ಶೇ.50ರವರೆಗೆ ಸೂಪರ್ ಕ್ಯಾಶ್ ಸಿಗಲಿದೆ. ಗ್ರಾಹಕರು ಒಮ್ಮೆ ಮಾತ್ರ ಈ ಕೊಡುಗೆಯನ್ನು ಪಡೆಯಬಹುದು. 250 ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಮೊಬೈಲ್ ಬಿಲ್ ಪಾವತಿಯನ್ನು ಮೊಬಿಕ್ವಿಕ್ ಮೂಲಕ ಮಾಡಿದ್ರೆ 100 ರೂ. ಕ್ಯಾಶ ಬ್ಯಾಕ್ ಸಿಗುತ್ತದೆ.

ಪೇಟಿಎಂ : ಪೇಟಿಎಂನಲ್ಲಿ 50 ರೂ. ರೀಚಾರ್ಜ್ ಮಾಡಿಸಿದ್ರೆ 10 ರೂ. ಡಿಸ್ಕೌಂಟ್ ಸಿಗುತ್ತದೆ. ಆ್ಯಪ್ ಮತ್ತು ವೆಬ್ ಸೈಟ್ ಎರಡರಲ್ಲೂ ಈ ಆಫರ್ ಲಭ್ಯವಿದೆ.

ಫ್ರೀಚಾರ್ಜ್ : 2017ರ ಡಿಸೆಂಬರ್ 26ರವರೆಗೆ ಮಾಡಿರುವ ಕನಿಷ್ಟ 300 ರೂಪಾಯಿ ರೀಚಾರ್ಜ್ ಮೇಲೆ 50 ರೂ. ಕ್ಯಾಶ್ ಬ್ಯಾಕ್ ದೊರೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...