alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆಜಾನ್ ಕೀ ಆಫರ್ ಕೇಳಿ ಬೆಚ್ಚಿ ಬಿದ್ದಿದ್ದಾರೆ ಜನ

ಅಮೆಜಾನ್ ಕಂಪನಿ ವಿಚಿತ್ರವಾದ ಹೊಸ ಆಫರ್ ಬಿಡುಗಡೆ ಮಾಡಿದೆ. ಹಾಲಿಡೇ ಸೀಸನ್ ಗಾಗಿಯೇ ಲಾಂಚ್ ಮಾಡಿರೋ ಈ ಕೊಡುಗೆಯ ಹೆಸರು ಅಮೆಜಾನ್ ಕೀ. ಈ ಆಫರ್ ಅಡಿಯಲ್ಲಿ ಲಾಕ್ ಆಗಿರೋ ಮನೆಗೂ ವಸ್ತುಗಳನ್ನು ಡೆಲಿವರಿ ಮಾಡಲಾಗುತ್ತದೆ.

ಈ ವಿಚಿತ್ರ ಆಫರ್ ಬಗ್ಗೆ ಟ್ವಿಟ್ಟರ್ ಬಳಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಕಳವು, ದರೋಡೆಯ ಸಾಧ್ಯತೆಗಳೇ ಹೆಚ್ಚು ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಅಷ್ಟೇ ಅಲ್ಲ ಸಾರ್ವಜನಿಕರ ಪ್ರೈವೆಸಿಗೂ ಧಕ್ಕೆ ಬರೋದ್ರಲ್ಲಿ ಅನುಮಾನವೇ ಇಲ್ಲ.

ಕಳ್ಳರು, ದರೋಡೆಕೋರರೆಲ್ಲ ಡೆಲಿವರಿ ಬಾಯ್ಸ್ ಆಗಲು ಆಸಕ್ತಿ ತೋರಬಹುದು ಅನ್ನೋದು ಜನರ ಆತಂಕ. ಯಾಕಂದ್ರೆ ಅಮೆಜಾನ್ ಡೆಲಿವರಿ ಹೆಸರಲ್ಲಿ ಲಾಕ್ ಆಗಿರೋ ಮನೆ ಬಾಗಿಲು ತೆರೆದು ಆರಾಮಾಗಿ ಕಳ್ಳತನ ಮಾಡಬಹುದು. ಅಮೆಜಾನ್ ಕೀ ಸೇವೆ ಸಂಪೂರ್ಣ ಉಚಿತ ಅಂತಾ ಕಂಪನಿ ಹೇಳಿದೆ.

ಇದಕ್ಕಾಗಿ ಅಮೆಜಾನ್ ಪ್ರೈಮ್ ಚಂದಾದಾರರು ವೈಫೈ ಕನೆಕ್ಟ್ ಆಗಿರೋ ಲಾಕರ್ ಖರೀದಿಸಬೇಕು. ಅದರ ಬೆಲೆ 250 ಡಾಲರ್. ಆದ್ರೆ ಯಾರೋ ಅಪರಿಚಿತರು ಬಂದು ಮನೆ ಬಾಗಿಲು ತೆಗೆದು, ಡೆಲಿವರಿ ಮಾಡಬೇಕಾಗಿರೋ ವಸ್ತುಗಳನ್ನು ಇಟ್ಟು ಹೋಗುವ ಕಲ್ಪನೆಯೇ ಭಯ ಹುಟ್ಟಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...