alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಿಗ್ತಿದೆ ಬಂಪರ್ ಆಫರ್

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಅಂಗವಾಗಿ ಜನಪ್ರಿಯ ಅಮೆಜಾನ್ ಆನ್ ಲೈನ್ ಮಾರುಕಟ್ಟೆ ಗ್ರಾಹಕರಿಗಾಗಿ ಭರ್ಜರಿ ಆಫರ್ ಗಳನ್ನು ಹೊತ್ತುತಂದಿದೆ. ಟಿವಿ, ಮೊಬೈಲ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಐಟಮ್ಸ್ ಹಾಗೂ ವಿವಿಧ ರೀತಿಯ ವಸ್ತುಗಳ ಮೇಲೆ ಭರಪೂರ ಕೊಡುಗೆಗಳನ್ನು ನೀಡಲು ನಿರ್ಧರಿಸಿದ್ದು, ಫ್ರೀಡಂ ಸೇಲ್ ಆಫರ್ ನೀಡುತ್ತಿದೆ.

ಈ ಆಫರ್ ಆಗಸ್ಟ್​ 9-12 ವರೆಗೆ ನಡೆಯಲಿದ್ದು, ಬಟ್ಟೆ ಬರೆಗಳ ಮೇಲೆ ಶೇ.80 ರಷ್ಟು ಹಾಗೂ ಮೊಬೈಲ್ ಫೋನ್ ಗಳ ಮೇಲೆ ಶೇ.40ರಷ್ಟು ರಿಯಾಯ್ತಿ ಸಿಗುವ ಸಾಧ್ಯತೆಯಿದೆ. ಈ ಮೂಲಕ ಗ್ರಾಹಕರು ತಮಗಿಷ್ಟವಾದ ಹಲವಾರು ವಸ್ತುಗಳ ಮೇಲೆ ಭಾರೀ ರಿಯಾಯಿತಿ ಪಡೆಯಬಹುದಾಗಿದೆ.

ಒನ್​ಪ್ಲಸ್​ 6, ರಿಯಲ್​ ಮಿ 1, ಹಾನರ್​ 7 ಎಕ್ಸ್​, ಮೊಟೊ ಜಿ6 ಸೇರಿದಂತೆ ಹಲವು ಮೊಬೈಲ್​ಗಳ ಮೇಲೆ ಅತಿ ಹೆಚ್ಚು ರಿಯಾಯಿತಿ ನೀಡಲಾಗುತ್ತಿದೆ. ಇನ್ನು ಅಮೆಜಾನ್​ ಪ್ರೈಮ್​ ಮೆಂಬರ್​ಗಳಿಗೂ ಹಲವಾರು ಆಫರ್​ಗಳು ಸಿಗಲಿವೆ.

ಇದಲ್ಲದೇ ಇಎಂಐ, ಎಕ್ಸ್​ಚೇಂಜ್​ ಆಫರ್​, ಹೀಗೆ ಹತ್ತು ಹಲವಾರು ಆಫರ್​ಗಳನ್ನು ನೀಡಲು ಅಮೆಜಾನ್​ ಇಂಡಿಯಾ ತೀರ್ಮಾನಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...