alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಅಮೆಜಾನ್ ಶುರು ಮಾಡ್ತಿದೆ ಗ್ರೇಟ್ ಇಂಡಿಯನ್ ಸೇಲ್

ಹೊಸ ವರ್ಷಾರಂಭದಲ್ಲಿ ಅಮೆಜಾನ್ ಇಂಡಿಯಾ, ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಶುರುಮಾಡ್ತಿದೆ. ಜನವರಿ 21ರಿಂದ 24ರವರೆಗೆ ಈ ಸೇಲ್ ನಡೆಯಲಿದೆ. ಅನೇಕ ಆಕರ್ಷಕ ಕೊಡುಗೆಗಳು ಈ ಸೇಲ್ ನಲ್ಲಿ ಗ್ರಾಹಕರಿಗೆ ಸಿಗಲಿದೆ. ಅಮೆಜಾನ್ ಪ್ರೈಂ ಸದಸ್ಯರಿಗೆ ಸೇಲ್ ಗಿಂತ 12 ಗಂಟೆ ಮೊದಲು ಅಂದ್ರೆ ಜನವರಿ 20ರಂದು ಮಧ್ಯಾಹ್ನ 12 ಗಂಟೆ ನಂತ್ರ ಈ ಸೇಲ್ ಸೌಲಭ್ಯ ಸಿಗಲಿದೆ.

ಅಮೆಜಾನ್ ಗ್ರೇಟ್ ಇಂಡಿಯಾ ಸೇಲ್ ನಲ್ಲಿ ಬ್ರ್ಯಾಂಡ್ ಕಂಪನಿ ವಸ್ತುಗಳ ಮೇಲೆ ರಿಯಾಯಿತಿ ಸಿಗಲಿದೆ. ಜೊತೆಗೆ ಕ್ಯಾಶ್ಬ್ಯಾಕ್ ಆಫರ್ ಕೂಡ ಲಭ್ಯವಾಗಲಿದೆ. ಅಮೆಜಾನ್ ಪೇ ನಲ್ಲಿ ಖರೀದಿ ಮಾಡುವ ಗ್ರಾಹಕರಿಗೆ ಕಂಪನಿ ಪ್ರತಿದಿನ ಶೇಕಡಾ 10ರಷ್ಟು ಕ್ಯಾಶ್ಬ್ಯಾಕ್ ನೀಡಲಿದೆ. 250 ಕ್ಕಿಂತ ಹೆಚ್ಚು ಬೆಲೆಯ ವಸ್ತು ಖರೀದಿ ಮಾಡಿದಲ್ಲಿ ಮಾತ್ರ ಈ ಕ್ಯಾಶ್ಬ್ಯಾಕ್ ಸಿಗಲಿದೆ.

ಈ ಸೇಲ್ ನಲ್ಲಿ ಆಪಲ್, ಒನ್ ಪ್ಲಸ್, ಹೆಚ್ ಪಿ , ಮೈಕ್ರೋಮ್ಯಾಕ್ಸ್, ಟಿಸಿಎಲ್, ಲೆನೊವೊ ಫಿಲಿಪ್ಸ್, ಎಲ್ಜಿ ಸೇರಿದಂತೆ ಹೆಸರಾಂತ ಕಂಪನಿಗಳ ವಸ್ತುಗಳ ಮೇಲೆ ರಿಯಾಯಿತಿ ಸಿಗ್ತಿದೆ. ಮೊಬೈಲ್ ಜೊತೆ ಲ್ಯಾಪ್ ಟಾಪ್ ಸೇರಿದಂತೆ ಅನೇಕ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ರಿಯಾಯಿತಿ ಸಿಗ್ತಿದೆ. ಬಟ್ಟೆ ಹಾಗೂ ಇತರೆ ಮನೆ ಬಳಕೆ ವಸ್ತುಗಳ ಮೇಲೂ ಅಮೆಜಾನ್ ರಿಯಾಯಿತಿ ನೀಡ್ತಿದೆ.

ಮೊಬೈಲ್ ಸೇರಿದಂತೆ ಬಿಡಿ ಭಾಗಗಳ ಮೇಲೆ ಶೇಕಡಾ 35ರಷ್ಟು ರಿಯಾಯಿತಿ ಸಿಗಲಿದೆ. ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಶೇಕಡಾ 55ರಷ್ಟು ರಿಯಾಯಿತಿ ಹಾಗೂ ಅಡುಗೆ ಸಲಕರಣೆ ಮೇಲೆ ಶೇಕಡಾ 50ರಷ್ಟು ರಿಯಾಯಿತಿ ಹಾಗೂ ಅಮೆಜಾನ್ ಫ್ಯಾಶನ್ ಮೇಲೆ ಶೇಕಡಾ 40-80ರಷ್ಟು ರಿಯಾಯಿತಿ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...