alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆಜಾನ್ ನಲ್ಲಿ ಸಿಗಲಿದೆ ಹಣ್ಣು,ತರಕಾರಿ?

ಆನ್ಲೈನ್ ಮಾರುಕಟ್ಟೆ ಅಮೆಜಾನ್ ಇಂಡಿಯಾ ನಿಧಾನವಾಗಿ ಭಾರತದ ಚಿಲ್ಲರೆ ಮಾರುಕಟ್ಟೆಗೂ ಕಾಲಿಡುತ್ತಿದೆ. ಆದಿತ್ಯ ಬಿರ್ಲಾ ರಿಟೇಲ್ ಗ್ರೂಪ್ ಗೆ ಸಂಬಂಧಿಸಿದ 523 ಸೂಪರ್ ಮಾರ್ಕೆಟ್    ಹಾಗೂ 20 ಹೈಪರ್ಮಾರ್ಕೆಟನ್ನು ಅಮೆಜಾನ್ ತನ್ನ ಸ್ವಾಧೀನಕ್ಕೆ ಪಡೆದಿದೆ. ಶೀರ್ಘವೇ ಆನ್ಲೈನ್ ಕಂಪನಿ ಹಣ್ಣು ಹಾಗೂ ತರಕಾರಿಯ ಮಾರಾಟ ಶುರು ಮಾಡಲಿದೆ.

ಅಮೆಜಾನ್ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಆದ್ರೆ ಅಮೆಜಾನ್ ಒಪ್ಪಂದದ ಪ್ರತಿಯಿಂದ ಇದು ಸ್ಪಷ್ಟವಾಗ್ತಿದೆ. ಅಮೆಜಾನ್ ಈಗಾಗಲೇ ಧಾನ್ಯಗಳ ಮಾರಾಟ ಶುರು ಮಾಡಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಹಾಗಾಗಿ ನಿಧಾನವಾಗಿ ಅಮೆಜಾನ್ ಹಣ್ಣು ಹಾಗೂ ತರಕಾರಿ ಮಾರಾಟಕ್ಕೂ ಚಿಂತನೆ ನಡೆಸುತ್ತಿದೆ.

ಅಮೆಜಾನ್ ಸೇರಿದಂತೆ ಅನೇಕ ಆನ್ಲೈನ್ ಕಂಪನಿಗಳು ಕಡಿಮೆ ದರದಲ್ಲಿ ಹಾಗೂ ವೇಗವಾಗಿ ಉತ್ಪನ್ನಗಳನ್ನು ಗ್ರಾಹಕರ ಮನೆಗೆ ತಲುಪಿಸುತ್ತಿವೆ. ಇದು ಚಿಲ್ಲರೆ ಮಾರಾಟಗಾರರ ಮೇಲೆ ಪ್ರಭಾವ ಬೀರಿದೆ. ಬೆಂಗಳೂರಿನಲ್ಲಿ ತರಕಾರಿ ವ್ಯಾಪಾರಿಗೆ ದಿನಕ್ಕೆ 2 ಸಾವಿರ ರೂಪಾಯಿ ವ್ಯಾಪಾರವಾಗುವುದು ಕಷ್ಟ. ಮಳೆ ಬಂದ್ರೆ ಸಂಪೂರ್ಣ ವ್ಯಾಪಾರ ಬಂದ್. ಹೀಗಿರುವಾಗ ಅಮೆಜಾನ್ ನಂತಹ ಕಂಪನಿ ಆನ್ಲೈನ್ ಮಾರಾಟ ಶುರು ಮಾಡಿದ್ರೆ ಅಂಗಡಿಗೆ ಬರುವವರ ಸಂಖ್ಯೆ ಇನ್ನಷ್ಟು ಕಡಿಮೆಯಾಗಲಿದೆ ಎಂಬುದು ಅವ್ರ ಆತಂಕ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...