alex Certify
ಕನ್ನಡ ದುನಿಯಾ       Mobile App
       

Kannada Duniya

ಹೈಕೋರ್ಟ್ ನಲ್ಲಿ ಉದ್ಯೋಗ ಮಾಡಲು ಸುವರ್ಣಾವಕಾಶ

ಹೈಕೋರ್ಟ್ ನಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳವರಿಗೊಂದು ಸುವರ್ಣಾವಕಾಶ. ಅಲಹಾಬಾದ್ ಹೈಕೋರ್ಟ್ 3495 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 8 ನೇ ತರಗತಿ, 10ನೇ ತರಗತಿ ಹಾಗೂ 12 ನೇ ತರಗತಿ ಪಾಸ್ ಆದವರಿಗೆ ಉದ್ಯೋಗ ಸಿಗಲಿದೆ.

ಹುದ್ದೆ ಹೆಸರು : ಸ್ಟೆನೊಗ್ರಾಫರ್, ಜೂನಿಯರ್ ಅಸಿಸ್ಟೆಂಟ್, ಆಪರೇಟರ್, ಕಾವಲುಗಾರ, ಚಾಲಕ ಸೇರಿದಂತೆ ಅನೇಕ ಹುದ್ದೆಗಳಿಗೆ ನೇಮಕಾತಿ.

ಯೋಗ್ಯತೆ : ಬೇರೆ ಬೇರೆ ಹುದ್ದೆಗಳಿಗೆ ಬೇರೆ ಬೇರೆ ವಿದ್ಯಾರ್ಹತೆ ಹಾಗೂ ಯೋಗ್ಯತೆ. 8ನೇ ತರಗತಿ ಪಾಸ್ ಆದವರು, 10ನೇ ತರಗತಿ ಪಾಸ್ ಆದವರು ಮತ್ತು 12ನೇ ತರಗತಿ ಪಾಸ್ ಆದವರು ಮತ್ತು ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಚಾಲನೆ ತಿಳಿದಿರಬೇಕು.

ವಯಸ್ಸಿನ ಮಿತಿ : ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ.

ಸಂಬಳ : ಆಯ್ಕೆಯಾದ ಸಿಬ್ಬಂದಿಗೆ 5,200 ರೂಪಾಯಿಯಿಂದ 20,200 ರೂಪಾಯಿಯವರೆಗೆ ಸಂಬಳ ಸಿಗಲಿದೆ.

ಅರ್ಜಿ ಸಲ್ಲಿಸಲು ಕೊನೆ ದಿನ : ಡಿಸೆಂಬರ್ 26 ಕೊನೆ ದಿನ.

ಅರ್ಜಿ ಸಲ್ಲಿಸುವ ಸ್ಥಳ : www.allahabadhighcourt.in

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...