alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಅಂಚೆ ಕಚೇರಿಗಳಲ್ಲಿ ಜಾರಿಗೆ ಬರಲಿದೆ ಪೋಸ್ಟ್ ಪೇಮೆಂಟ್ ಬ್ಯಾಂಕ್ ವ್ಯವಸ್ಥೆ

ಸೆಪ್ಟೆಂಬರ್ 1 ರಿಂದ ಭಾರತೀಯ ಅಂಚೆ ಇಲಾಖೆಯಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರುತ್ತಿದೆ. ಭಾರತದಲ್ಲಿರುವ 1 ಲಕ್ಷದ 55 ಸಾವಿರ ಅಂಚೆ ಕಚೇರಿಗಳು ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ವ್ಯವಸ್ಥೆಗೆ ಒಳಪಡಲಿವೆ. ಡಿಸೆಂಬರ್ 31 ರ ಒಳಗೆ ದೇಶದ ಎಲ್ಲಾ ಅಂಚೆ ಕಚೇರಿಗಳು ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ತಮ್ಮ ಅಂಚೆ ಕಚೇರಿಯನ್ನು ಲಿಂಕ್ ಮಾಡಬೇಕು.

ಸೆಪ್ಟೆಂಬರ್ 1ರಂದು 650 ಬ್ರ್ಯಾಂಚ್ ಗಳಲ್ಲಿನ 3250 ಆಕ್ಸಸ್ ಪಾಯಿಂಟ್ ಗಳನ್ನ ಪ್ರಾರಂಭಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಆಕ್ಸಸ್ ಪಾಯಿಂಟ್ ಗಳ ಸಂಖ್ಯೆಯನ್ನ 1 ಲಕ್ಷ 30 ಸಾವಿರಕ್ಕೆ ಏರಿಸೋಕೆ ನಿರ್ಧರಿಸಿದೆ. ಪ್ರಸ್ತುತ ಅಂಚೆ ಕಚೇರಿಗಳಲ್ಲಿ ಖಾತೆ ಹೊಂದಿರುವ ಗ್ರಾಹಕರು ಈ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ಪ್ರಯೋಜನ ಪಡೆದುಕೊಳ್ಳಬಹುದು.

ಅಂಚೆ ಕಚೇರಿಗಳಲ್ಲಿ ಖಾತೆ ಹೊಂದಿರುವ ಗ್ರಾಹಕರಿಗಾಗಿ ಪ್ರತ್ಯೇಕ ಕ್ಯೂ ಆರ್ ಕೋಡ್ ಗಳನ್ನ ನೀಡಲಾಗುತ್ತದೆ. ಹಾಗು ಅವರಿಗಾಗಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಕೂಡ ಜಾರಿಗೆ ತರಲಾಗುತ್ತದೆ. ಪೋಸ್ಟ್ ಪೇಮೆಂಟ್ ಬ್ಯಾಂಕ್ ಯೋಜನೆಯನ್ನ ಜಾರಿಗೆ ತರೋದಕ್ಕೆ ಕೇಂದ್ರ ಕ್ಯಾಬಿನೆಟ್ 800 ಕೋಟಿಯಿಂದ 1450 ಕೋಟಿ ಅಂದಾಜು ವೆಚ್ಚವನ್ನ ನಿಗದಿಪಡಿಸಿದೆ.

400 ಕೋಟಿ ವೆಚ್ಚದಲ್ಲಿ ತಂತ್ರಜ್ಞಾನ ಮತ್ತು 235 ಕೋಟಿ ವೆಚ್ಚದಲ್ಲಿ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸಿಬ್ಬಂದಿಗಳಿಗಾಗಿ ಕೇಂದ್ರ ಸರ್ಕಾರ ಖರ್ಚು ಮಾಡ್ತಿದೆ. ಬ್ಯಾಂಕ್ ಗಳ ಹಾಗೆ ಪೋಸ್ಟ್ ಆಫೀಸ್ ಕೂಡ ತನ್ನ ಬ್ಯಾಂಕ್ ಗಳ ಮೂಲಕ ಹಲವು ಸೇವೆಯನ್ನ ನೀಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...