alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಗೂ ಮುನ್ನವೇ ಬಹಿರಂಗವಾಯ್ತು ಆಪಲ್ ಹೊಸ ಐಫೋನ್ ಬೆಲೆ

ಅಮೆರಿಕಾ ಟೆಕ್ನಾಲಜಿ ಕಂಪನಿ ಆ್ಯಪಲ್ ಶೀಘ್ರವೇ  iPhone Xs ಸರಣಿಯ ಫೋನ್ ಬಿಡುಗಡೆ ಮಾಡಲಿದೆ. ಹೊಸ ಫೋನ್ ಸೆಪ್ಟೆಂಬರ್ 12 ರಂದು ಬಿಡುಗಡೆಯಾಗಲಿದೆ. ಮೂಲಗಳ ಪ್ರಕಾರ ಈ ಬಾರಿ ಕಂಪನಿ ಮೂರು ಫೋನ್ ಬಿಡುಗಡೆ ಮಾಡಲಿದೆ. iPhone Xs, iPhone Xs Max ಮತ್ತು LCD ಡಿಸ್ ಪ್ಲೇ ಹೊಂದಿರುವ 6.1 ಇಂಚಿನ ಐಫೋನ್ ಬಿಡುಗಡೆ ಮಾಡಲಿದೆ.

ಬಿಡುಗಡೆಗೂ ಮುನ್ನವೇ ಫೋನ್ ಗೆ ಸಂಬಂಧಿಸಿದ ಅನೇಕ ಸಂಗತಿಗಳು ಬಹಿರಂಗವಾಗಿವೆ. ಜರ್ಮನ್ ವೆಬ್ ಸೈಟ್ macerkopf.de ನಲ್ಲಿ ಹೊಸ ಫೋನ್ ನ  ಬೆಲೆ ಸೋರಿಕೆಯಾಗಿದೆ. ವೆಬ್ ಸೈಟ್ ಪ್ರಕಾರ, 64 ಜಿಬಿ  iPhone Xs ಬೆಲೆ €909 (ಸುಮಾರು 75,000 ಸಾವಿರ ರೂಪಾಯಿ).

iPhone Xs Max ಮೊಬೈಲ್ ಬೆಲೆ €1,149 ( ಸುಮಾರು 96,000 ರೂಪಾಯಿ) ಎನ್ನಲಾಗಿದೆ. 256 ಜಿಬಿ ಮೊಬೈಲ್ ಬೆಲೆ €170 (14,000 ರೂಪಾಯಿ) ಎಂದು ಹೇಳಲಾಗ್ತಿದೆ. Xs ಸರಣಿಯ 6.1 ಇಂಚಿನ ಎಲ್ಸಿಡಿ ವರ್ಜನ್ €799 (66,000 ರೂಪಾಯಿ). iPhone XS Max ದೊಡ್ಡ ಐಫೋನ್ ಆಗಲಿದೆ. ಇದ್ರಲ್ಲಿ OLED ಡಿಸ್ಲ್ಪೇ ಜೊತೆ ಸೆನ್ಸಾರ್ ಇರುವ ಡ್ಯುವೆಲ್ OIS ಇರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...