alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಪತ್ತು ವೃದ್ಧಿಗೆ ಸಹಕಾರಿಯಾಗುತ್ತೆ ಈ ದಿನ

ಎಷ್ಟೆಲ್ಲಾ ದುಡಿದ್ರೂ ಕೈಗೆ ಹತ್ತಲ್ಲ ಎಂದು ಕೊರಗುವವರಿಗೆ ಸಲಹೆಯೊಂದು ಇಲ್ಲಿದೆ. ವಿಶೇಷವಾದ ದಿನದಂದು ವಿಶೇಷ ನಿರ್ಧಾರವೊಂದನ್ನು ಕೈಗೊಂಡಲ್ಲಿ ನಿಮ್ಮ ಸಂಪತ್ತು ವೃದ್ಧಿಯಾಗುತ್ತದೆ.

ಇದೇ ಏಪ್ರಿಲ್ 18 ರ ಬುಧವಾರದಂದು ಅಕ್ಷಯ ತೃತೀಯ. ಈ ದಿನದಂದು ಚಿನ್ನವನ್ನು ಖರೀದಿಸಿದರೆ ಒಳ್ಳೆಯದಾಗುತ್ತದೆ. ಸಂಪತ್ತು ವೃದ್ಧಿಸುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಇತ್ತೀಚಿನ ವರ್ಷಗಳಲ್ಲಿ ಅಕ್ಷಯ ತೃತೀಯ ಮಾರ್ಕೇಟಿಂಗ್ ಟ್ರೆಂಡ್ ಆಗಿಬಿಟ್ಟಿದೆ.

ಮಧ್ಯಮ ವರ್ಗದ ಜನರ ಕೊಳ್ಳುಬಾಕ ಸಂಸ್ಕೃತಿಯನ್ನೇ ಬಂಡವಾಳ ಮಾಡಿಕೊಂಡ ಕೆಲವು ಚಿನ್ನಾಭರಣ ವರ್ತಕರು ಅಕ್ಷಯ ತೃತೀಯ ಪ್ರಯುಕ್ತ ಭರ್ಜರಿ ವಹಿವಾಟು ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ ಖರೀದಿ ಮೇಲೆ ವಿಶೇಷ ಆಫರ್ ನೀಡುತ್ತಾರೆ. ಮೊದಲೇ ಮುಂಗಡ ಹಣ ಸಲ್ಲಿಸಿ, ನಿಮ್ಮ ಚಿನ್ನವನ್ನು ಬುಕ್ ಮಾಡಿ ಅಕ್ಷಯ ತೃತೀಯ ದಿನದಂದು ಮನೆಗೆ ಕೊಂಡೊಯ್ಯಬಹುದು. ಈ ದಿನ ಚಿನ್ನವನ್ನು ಮನೆಗೆ ತರುವುದರಿಂದ ಐಶ್ವರ್ಯ ಹೆಚ್ಚಾಗುತ್ತದೆ.

ಇದೆಲ್ಲಾ ಇರಲಿ, ಚಿನ್ನವನ್ನು ಖರೀದಿಸಿದರೆ, ಸಂಪತ್ತು ವೃದ್ಧಿಯಾಗುತ್ತದೆ ಎಂಬುದು ನಂಬಿಕೆ. ಅದರ ಹೊರತಾಗಿಯೂ ನಿಮ್ಮ ಸಂಪತ್ತು ವೃದ್ಧಿಗೆ ಸರಳ ವಿಧಾನವನ್ನು ಅನುಸರಿಸಬಹದು. ಅಕ್ಷಯ ತೃತೀಯ ದಿನದಿಂದ ನಿಮ್ಮ ಗಳಿಕೆಯಲ್ಲಿ ಒಂದಷ್ಟು ಭಾಗವನ್ನು ಉಳಿಸಲು ಮುಂದಾಗಿ.

ದಿನ, ವಾರ, ತಿಂಗಳು ಹೀಗೆ ನಿಮ್ಮ ಉಳಿತಾಯವನ್ನು ಮಾಡುತ್ತಾ ಬನ್ನಿ. ಮುಂದಿನ ವರ್ಷದ ಅಕ್ಷಯ ತೃತೀಯ ವೇಳೆಗೆ ನಿಮ್ಮ ಉಳಿತಾಯ ಹೆಚ್ಚಾಗಿರುತ್ತೆ. ಸಂಪತ್ತು ವೃದ್ಧಿಯಾಗುತ್ತಾ ಹೋಗುತ್ತೆ. ಇದೇ ಸಂಪತ್ತು ವೃದ್ಧಿಯ ದಾರಿ ಎನ್ನುತ್ತಾರೆ ಬಲ್ಲವರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...