alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ಷಯ ತೃತೀಯದಂದು ಬಂಗಾರ ಖರೀದಿಗೆ ಮುಂದಾಗ್ತಿಲ್ಲ ಜನ, ಕಾರಣವೇನು ಗೊತ್ತಾ?

ಅಕ್ಷಯ ತೃತೀಯದಂದು ಬಂಗಾರ ಖರೀದಿಗೆ ಎಲ್ಲರೂ ಮುಂದಾಗ್ತಾರೆ. ಬಂಗಾರ ಹೂಡಿಕೆಗೆ ಉಪಯುಕ್ತವೆಂದು ಜನರು ಭಾವಿಸಿದ್ದಾರೆ. ಖರೀದಿ ನಂತ್ರ ಬಂಗಾರ ನಮ್ಮ ಬಳಿಯೇ ಇರುತ್ತದೆ. ಅವಶ್ಯಕತೆ ಬಿದ್ದಾಗ ಬಂಗಾರವನ್ನು ಮಾರಾಟ ಮಾಡಬಹುದು. ಚಿನ್ನ ಮಾರಾಟಕ್ಕೆ ಹೆಚ್ಚು ಕಷ್ಟವಾಗುವುದಿಲ್ಲ ಎಂಬುದು ಜನರ ನಂಬಿಕೆ.

ಈಗ ಕಾಲ ಬದಲಾಗಿದೆ. 20 ವರ್ಷಗಳ ಹಿಂದೆ ಚಿನ್ನಕ್ಕಿದ್ದ ಬೆಲೆ ಈಗಿಲ್ಲ. ಅಂದ್ರೆ ಚಿನ್ನವನ್ನು ವಾಪಸ್ ಮಾರಾಟ ಮಾಡಿದ್ರೆ ಆಗಿನಷ್ಟು ಲಾಭ ಸಿಗ್ತಿಲ್ಲ. ಅದೇ ಹಣವನ್ನು ಬ್ಯಾಂಕ್ ನಲ್ಲಿಟ್ಟರೆ ಹೆಚ್ಚು ಬಡ್ಡಿ ಸಿಗುತ್ತೆ ಎನ್ನುತ್ತಾರೆ ಹೂಡಿಕೆದಾರರು.

1998 ರ ಸಮಯದಲ್ಲಿ 10 ಗ್ರಾಂ ಚಿನ್ನದ ಬೆಲೆ 4,025 ರೂಪಾಯಿಯಿತ್ತು. ಈಗ 24 ಕ್ಯಾರೆಟ್ ಚಿನ್ನದ ಬೆಲೆ 32 ಸಾವಿರ ರೂಪಾಯಿ. ಆಗ ಚಿನ್ನದ ಮೇಲೆ ಹೂಡಿಕೆ ಮಾಡಿದ್ರೆ 2 ಅಂಕದಷ್ಟು ಆದಾಯ ಸಿಗ್ತಿತ್ತು. ಪ್ರತಿಶತ 10.05ನಷ್ಟು ಆದಾಯ ಪಡೆಯಬಹುದಾಗಿತ್ತು.

15 ವರ್ಷಗಳ ನಂತ್ರದ ದಿನಗಳ ಬಗ್ಗೆ ಮಾತನಾಡುವುದಾದ್ರೆ ಬಂಗಾರದ ಮೇಲೆ ಹೂಡಿಕೆ ಮಾಡಿದ್ರೆ ಕಡಿಮೆ ಆದಾಯ ಸಿಗ್ತಿತ್ತು. ವಾರ್ಷಿಕ ಪ್ರತಿಶತ 8.89ರಷ್ಟು ಮಾತ್ರ ಆದಾಯ ಸಿಗ್ತಿತ್ತು. 10 ವರ್ಷದ ಹಿಂದಿನ ದಿನಗಳ ಬಗ್ಗೆ ಹೇಳುವುದಾದ್ರೆ ಆದಾಯ ಹೆಚ್ಚಾಗುವ ಬದಲು ಇಳಿಕೆಯಾಗ್ತಿದೆ. ಈಗ ಪ್ರತಿಶತ 5.82ರಷ್ಟು ಆದಾಯ ಸಿಗ್ತಿತ್ತು. 7 ವರ್ಷಗಳ ಹಿಂದೆ ಬಂಗಾರದ ಮೇಲೆ ಹೂಡಿಕೆ ಮಾಡಿದ್ರೆ ಕೇವಲ ಶೇಕಡಾ 3.45 ರಷ್ಟು ಮಾತ್ರ ಆದಾಯ ವಾಪಸ್ ಸಿಗ್ತಿದೆ.

ಈಗ ಕೂಡ ಪರಿಸ್ಥಿತಿ 5-6 ವರ್ಷದಂತೆ ಇದೆ. ಯಾವುದೇ ಬದಲಾವಣೆಯಾಗಿಲ್ಲ. ಹಾಗಾಗಿ ಬಂಗಾರದ ಮೇಲೆ ಹೂಡಿಕೆ ಮಾಡಲು ಜನರು ಹಿಂದೇಟು ಹಾಕ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...