alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಅಂಬಾನಿ ಪುತ್ರ

ಉದ್ಯಮಿ ಮುಕೇಶ್ ಅಂಬಾನಿ ಮಗ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಉತ್ತರಾಖಂಡದ ತ್ರಿಯುಗಿನಾರಾಯಣ ಮಂದಿರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಅಂಬಾನಿ ಕುಟುಂಬ ಉತ್ತರಾಖಂಡ ಸರ್ಕಾರದ ಜೊತೆ ಮಾತುಕತೆ ನಡೆಸಿದೆಯಂತೆ.

ತ್ರಿಯುಗಿನಾರಾಯಣ ಮಂದಿರದಲ್ಲಿ ಅನೇಕ ದಿಗ್ಗಜರ ಮದುವೆ ನಡೆದಿದೆ. ಈ ದೇವಸ್ಥಾನದಲ್ಲಿ ಹೊಸ ಬಾಳು ಶುರುಮಾಡುವ ಇಚ್ಛೆಯನ್ನು ಶ್ಲೋಕಾ ಮೆಹ್ತಾ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ತ್ರಿಯುಗಿ ನಾರಾಯಣ ದೇವಸ್ಥಾನವನ್ನು ಅಲ್ಲಿನ ಸರ್ಕಾರ ಮದುವೆ ತಾಣವಾಗಿ ಘೋಷಣೆ ಮಾಡಿದೆ.

ಸಮುದ್ರ ಮಟ್ಟದಿಂದ 9000 ಅಡಿ ಎತ್ತರದಲ್ಲಿರುವ ಈ ದೇವಸ್ಥಾನದಲ್ಲಿ ಶಿವ-ಪಾರ್ವತಿಯರ ಮದುವೆ ನಡೆದಿತ್ತಂತೆ. ಅಲ್ಲಿರುವ ಅಗ್ನಿಕುಂಡದ ಹತ್ತಿರವೇ ಪಾರ್ವತಿ-ಶಿವ ಸಪ್ತಪದಿ ತುಳಿದಿದ್ದರಂತೆ. ಮೂರು ಯುಗಗಳಿಂದ ಅಗ್ನಿ ಕುಂಡದಲ್ಲಿರುವ ಬೆಂಕಿ ನಂದಿಲ್ಲ. ಹಾಗಾಗಿಯೇ ಈ ಮಂದಿರಕ್ಕೆ ತ್ರಿಯುಗಿ ಎಂದು ಹೆಸರಿಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...