alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಬಾನಿ ಮಗನ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್

ದೇಶದ ಅತಿ ದೊಡ್ಡ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಆಕಾಶ್ ಅಂಬಾನಿ ಶ್ಲೋಕಾ ಮೆಹ್ತಾ ಜೊತೆ ಜೂನ್ 30 ರಂದು ಉಂಗುರ ಬದಲಿಸಿಕೊಳ್ಳಲಿದ್ದಾರೆ. ಆಕಾಶ್ ಅಂಬಾನಿ ನಿಶ್ಚಿತಾರ್ಥದ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಕಾಶ್-ಶ್ಲೋಕಾ ನಿಶ್ಚಿತಾರ್ಥ ಜೂನ್ 30 ರಂದು ಮುಂಬೈನಲ್ಲಿ ನಡೆಯಲಿದೆ. ಗೋವಾದಲ್ಲಿ ಮಾರ್ಚ್ 24 ರಂದು ಫ್ರೀ ವೆಡ್ಡಿಂಗ್ ಪಾರ್ಟಿ ನಡೆದಿತ್ತು. ಆಕಾಶ್ ಅಂಬಾನಿ, ಶ್ಲೋಕಾ ನಿಶ್ಚಿತಾರ್ಥಕ್ಕೆ ಡಿಜಿಟಲ್ ಆಮಂತ್ರಣ ಪತ್ರಿಕೆ ಸಿದ್ಧವಾಗಿದೆ. ಕಾರ್ಡ್ ನಲ್ಲಿ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಫೋಟೋ ಹಾಕಲಾಗಿದೆ.

ನಿಶ್ಚಿತಾರ್ಥದ ದಿನಾಂಕ ಹಾಗೂ ಸಮಯವನ್ನು ಕಾರ್ಡ್ ನಲ್ಲಿ ಹೇಳಲಾಗಿದೆ. ಬಾಲಿವುಡ್ ಚಿತ್ರ ಶುಭಾರಂಭದ ಹಾಡನ್ನು ಹಿನ್ನೆಲೆಯಾಗಿ ಬಳಸಲಾಗಿದೆ. ಚಿಕ್ಕವರಿರುವಾಗಿನಿಂದಲೂ ಆಕಾಶ್-ಶ್ಲೋಕಾ ಪರಿಚಿತರು. ಎರಡೂ ಕುಟುಂಬದ ನಡುವೆ 40 ವರ್ಷಗಳ ಸ್ನೇಹವಿದೆ. 4 ದಶಕಗಳ ನಂತ್ರ ಸ್ನೇಹ ಸಂಬಂಧಕ್ಕೆ ತಿರುಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...