alex Certify
ಕನ್ನಡ ದುನಿಯಾ       Mobile App
       

Kannada Duniya

ಮೂರು ತಿಂಗಳ ನೆಟ್ಫ್ಲಿಕ್ಸ್ ಚಂದಾದಾರರಿಗೆ ಉಚಿತವಾಗಿ ನೀಡ್ತಿದೆ ಏರ್ಟೆಲ್

ಏರ್ಟೆಲ್ ಹಿಂದಿನ ವಾರ ತನ್ನ ಪೋಸ್ಟ್ಪೇಯ್ಡ್ ಮತ್ತು ಬ್ರಾಡ್ಬ್ಯಾಂಡ್ ಗ್ರಾಹಕರಿಗೆ ನೆಟ್ಫ್ಲಿಕ್ಸ್ ಸೌಲಭ್ಯವನ್ನು ಮೂರು ತಿಂಗಳು ಉಚಿತವಾಗಿ ನೀಡುವ ಘೋಷಣೆ ಮಾಡಿತ್ತು. ಏರ್ಟೆಲ್ ತನ್ನ ಮಾತು ಉಳಿಸಿಕೊಂಡಿದೆ. ಪೋಸ್ಟ್ಪೇಯ್ಡ್ ಗ್ರಾಹಕರಿಗೆ ನೆಟ್ಫ್ಲಿಕ್ಸ್ ಸೇವೆಯನ್ನು ನೀಡಲು ಶುರು ಮಾಡಿದೆ.

ಈ ಆಫರ್ ಲಾಭ ಪಡೆಯಲು ಏರ್ಟೆಲ್ ಗ್ರಾಹಕರು ಮೈ ಏರ್ಟೆಲ್ ಆ್ಯಪ್ ಗೆ ಹೋಗಬೇಕು. ಏರ್ಟೆಲ್ ಥ್ಯಾಂಕ್ಸ್ ಬ್ಯಾನರ್ ಮೇಲೆ ಕ್ಲಿಕ್ ಮಾಡಿ ಈ ಸೇವೆ ಪಡೆಯಬಹುದು. 499 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ ಪ್ಲಾನ್ ಹೊಂದಿರುವ ಗ್ರಾಹಕರು ಉಚಿತ ಚಂದಾದಾರತ್ವ ಪಡೆಯಬಹುದಾಗಿದೆ.

ಮೂರು ತಿಂಗಳ ಕಾಲ ನೆಟ್ಫ್ಲಿಕ್ಸ್ ಚಂದಾದಾರತ್ವ ಉಚಿತವಾಗಿ ಸಿಗಲಿದೆ. ನೆಟ್ಪ್ಲಿಕ್ಸ್ ನ 500 ರೂಪಾಯಿ ತಿಂಗಳ ಯೋಜನೆ ಗ್ರಾಹಕರಿಗೆ ಸಿಗಲಿದೆ. ಮೈ ಏರ್ಟೆಲ್ ಆ್ಯಪ್ ನ ಆರ್ಟೆಲ್ ಥ್ಯಾಂಕ್ಸ್ ಬ್ಯಾನರ್ ನಲ್ಲಿ 1500 ರೂಪಾಯಿ ನೆಟ್ಫ್ಲಿಕ್ಸ್ ಗಿಫ್ಟ್ ವೋಚರ್ ಸಿಗಲಿದೆ. ನಂತ್ರ Claim ಬಟನ್ ಕ್ಲಿಕ್ ಮಾಡಬೇಕಾಗುತ್ತದೆ. ನಂತ್ರ ನೆಟ್ಫ್ಲಿಕ್ಸ್ ಅಕೌಂಟ್ ಲಾಗ್ ಇನ್ ಮಾಡಿ ಅದ್ರಲ್ಲಿ proceed ಬಟನ್ ಕ್ಲಿಕ್ ಮಾಡಬೇಕು. ಮೊದಲೇ ನೀವು ನೆಟ್ಫ್ಲಿಕ್ಸ್ ಚಂದಾದಾರರಾಗಿದ್ದರೆ ಗಿಫ್ಟ್ ವೋಚರ್ ನೇರವಾಗಿ ನಿಮ್ಮ ಅಕೌಂಟ್ ಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...