alex Certify
ಕನ್ನಡ ದುನಿಯಾ       Mobile App
       

Kannada Duniya

ಭರ್ಜರಿ ಆಫರ್ ನೀಡ್ತಿದೆ ಏರ್ಟೆಲ್ : ಈ ಪ್ಲಾನ್ ನಲ್ಲಿ ಸಿಗಲಿದೆ 90ಜಿಬಿ ಡೇಟಾ

ಏರ್ಟೆಲ್ ತನ್ನ ಪೋಸ್ಟ್ ಪೇಯ್ಡ್ ಪ್ಲಾನ್ 649 ರೂಪಾಯಿಯಲ್ಲಿ ಬದಲಾವಣೆ ಮಾಡಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಕಂಪನಿ ಶೇಕಡಾ 80ರಷ್ಟು ಹೆಚ್ಚುವರಿ ಡೇಟಾ ನೀಡ್ತಿದೆ. ಈ ಪ್ಲಾನ್ ಮೈಪ್ಲಾನ್ ಇನ್ಫಿನಿಟಿ ಅಡಿಯಲ್ಲಿ ಬರ್ತಿದೆ. ಮೈಪ್ಲಾನ್ ಇನ್ಫಿನಿಟಿಯಲ್ಲಿ 399, ರೂ 499, ರೂ 799 ಮತ್ತು 1,199 ರೂಪಾಯಿ ಯೋಜನೆಗಳೂ ಸೇರಿವೆ.ಆದ್ರೆ 699 ರೂಪಾಯಿ ಪ್ಲಾನ್ ನಲ್ಲಿ ಮಾತ್ರ ಕಂಪನಿ ಬದಲಾವಣೆ ಮಾಡಿದೆ.

ಏರ್ಟೆಲ್ ನ ಈ ಪ್ಲಾನ್ ನಲ್ಲಿ ಮೊದಲು 50ಜಿಬಿ 3ಜಿ ಹಾಗೂ 4ಜಿ ಡೇಟಾ ಸಿಗ್ತಾಯಿತ್ತು. ಈಗ 649 ರೂಪಾಯಿ ಪ್ಲಾನ್ ನಲ್ಲಿ ಪ್ರತಿ ತಿಂಗಳು 90ಜಿಬಿ ಡೇಟಾ ಸಿಗಲಿದೆ. ಜೊತೆಗೆ 100 ಎಸ್ ಎಂಎಸ್ ಪ್ರತಿದಿನ ಸಿಗಲಿದೆ. ಅನಿಯಮಿತ ವೈಸ್ ಕಾಲ್ ಹಾಗೂ ಉಚಿತ ರೋಮಿಂಗ್ ಕಾಲ್ ಸಿಗಲಿದೆ. ಅನಿಯಮಿತ ಕಾಲ್ ಗೆ ಯಾವುದೇ ಸಮಯ ಮಿತಿಯಿಲ್ಲ. ಉಳಿದ ಡೇಟಾ ಮುಂದಿನ ತಿಂಗಳಿಗೆ ವರ್ಗಾವಣೆಯಾಗಲಿದೆ.

649 ರೂಪಾಯಿ ಪ್ಲಾನ್ ನಲ್ಲಿ ಆ್ಯಡ್ ಆನ್ ಕನೆಕ್ಷನ್ ಫೆಸಿಲಿಟಿ, Wynk TV ಚಂದಾದಾರತ್ವ,ಲೈವ್ ಟಿವಿ ಸೌಲಭ್ಯ ಕೂಡ ಸಿಗಲಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...