alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋಗೆ ಟಕ್ಕರ್: ಏರ್ಟೆಲ್ ನೀಡ್ತಿದೆ ಡಬಲ್ ಡೇಟಾ

ರಿಲಾಯನ್ಸ್ ಜಿಯೋ ಸವಾಲಿಗೆ ದೇಶದ ನಂಬರ್ ಒನ್ ಟೆಲಿಕಾಂ ಕಂಪನಿ ಏರ್ಟೆಲ್ ಉತ್ತರ ನೀಡಿದೆ. ತನ್ನ 99 ರೂಪಾಯಿ ಯೋಜನೆಯಲ್ಲಿ ಬದಲಾವಣೆ ಮಾಡಿದೆ. 28 ದಿನಗಳ ಸಿಂಧುತ್ವದಲ್ಲಿ ಇನ್ಮುಂದೆ ಗ್ರಾಹಕರಿಗೆ 2ಜಿಬಿ ಡೇಟಾ ಸಿಗಲಿದೆ. ಈ ಹಿಂದೆ ಗ್ರಾಹಕರಿಗೆ 1 ಜಿಬಿ ಹೈ ಸ್ಪೀಡ್ ಡೇಟಾ ಲಭ್ಯವಿತ್ತು.

ಡಬಲ್ ಡೇಟಾ ಜೊತೆ ಏರ್ಟೆಲ್ ಗ್ರಾಹಕರಿಗೆ ಅನಿಯಮಿತ ಕಾಲಿಂಗ್ ಜೊತೆ ಉಚಿತ ರೋಮಿಂಗ್ ಸೌಲಭ್ಯ ನೀಡ್ತಿದೆ. 99 ರೂಪಾಯಿ ರಿಚಾರ್ಜ್ ಮಾಡಿದ ಗ್ರಾಹಕರಿಗೆ ಪ್ರತಿ ದಿನ 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ. ಈ ಯೋಜನೆ ಕೆಲ ಆಯ್ದ ಗ್ರಾಹಕರಿಗೆ ಮಾತ್ರ ಸಿಗ್ತಿದೆ. ಶೀಘ್ರದಲ್ಲಿಯೇ ಈ ಸೌಲಭ್ಯ ಎಲ್ಲ ಗ್ರಾಹಕರಿಗೆ ಸಿಗಲಿದೆ.

ರಿಲಾಯನ್ಸ್ ಜಿಯೋ ಬಳಿಯೂ 99 ರೂಪಾಯಿ ಪ್ಲಾನ್ ಇದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 100 ಎಸ್ಎಂಎಸ್ ಸಿಗ್ತಿಲ್ಲ. ಜಿಯೋ 28 ದಿನಗಳಲ್ಲಿ ಕೇವಲ 300 ಎಸ್ಎಂಎಸ್ ನೀಡ್ತಿದೆ. ಕೆಲ ದಿನಗಳ ಹಿಂದಷ್ಟೇ ಜಿಯೋ ತನ್ನ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ. ಜಿಯೋದ ಎಲ್ಲ ಗ್ರಾಹಕರಿಗೆ ಎಲ್ಲ ಪ್ಲಾನ್ ನಲ್ಲಿ 1.5 ಜಿಬಿ ಡೇಟಾ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...