alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ ಟೆಲ್ ಗ್ರಾಹಕರಿಗೆ ಇಲ್ಲಿದೆ ಸಿಹಿಯಾದ ಸುದ್ದಿ

ನವದೆಹಲಿ: ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸ್ಪರ್ಧೆ ಉಂಟಾಗಿದೆ. ಕಂಪನಿಗಳ ನಡುವಿನ ಪೈಪೋಟಿಯಲ್ಲಿ ಗ್ರಾಹಕರಿಗೆ ವಿವಿಧ ಆಫರ್ ಸಿಗುತ್ತಿವೆ.

ಭಾರತದ ಪ್ರಮುಖ ಟೆಲಿಕಾಂ ಕಂಪನಿಯಾಗಿರುವ ಏರ್ ಟೆಲ್ ಉಚಿತವಾಗಿ VoLTE ಕರೆ ಸೌಲಭ್ಯವನ್ನು ನೀಡಲು ಮುಂದಾಗಿದೆ.

ಮುಂಬೈನಲ್ಲಿ ಮುಂದಿನವಾರ VoLTE ಕರೆ ಸೌಲಭ್ಯ ಆರಂಭವಾಗಲಿದೆ. ಜಿಯೊ ಫೋನ್ ಶೀಘ್ರವೇ ಗ್ರಾಹಕರ ಕೈ ಸೇರಲಿದ್ದು, ಈ ವೇಳೆಗೆ ಏರ್ ಟೆಲ್ VoLTE ಕರೆ ಸೌಲಭ್ಯ ಕಲ್ಪಿಸಲಾಗುವುದು. ಪ್ರಸ್ತುತ ಜಿಯೊ ಮಾತ್ರ VoLTE ಕರೆ ಸೌಲಭ್ಯ ನೀಡುತ್ತಿದೆ. ಇದರಲ್ಲಿ ಕರೆಗಳಿಗೆ 4 ಜಿ ಸಂಪರ್ಕವನ್ನು ಬಳಸಲಾಗುತ್ತದೆ.

ಇದೇ ಮಾದರಿಯಲ್ಲಿ ಏರ್ ಟೆಲ್ ಕೂಡ ಪರಿಣಾಮಕಾರಿಯಾದ VoLTE ಕರೆ ಸೌಲಭ್ಯವನ್ನು ಉಚಿತವಾಗಿ ನೀಡಲಿದೆ. ಆರಂಭಿಕವಾಗಿ ಮುಂಬೈನಲ್ಲಿ ಈ ಸೇವೆ ಆರಂಭವಾಗಲಿದ್ದು, ಬಳಿಕ ದೆಹಲಿ, ಕೋಲ್ಕತ್ತ ಸೇರಿದಂತೆ ಉಳಿದ ಕಡೆಗಳಲ್ಲೂ ವಿಸ್ತರಣೆಯಾಗಲಿದೆ.

ಕಳೆದ ವರ್ಷ ಜಿಯೋ ಮಾರುಕಟ್ಟೆಗೆ ಪ್ರವೇಶಿಸಿದ ನಂತರ, ಹೊಸ ತಂತ್ರಜ್ಞಾನ VoLTE ಭಾರತದಲ್ಲಿ ಜನಪ್ರಿಯವಾಯಿತು. ಜಿ.ಎಸ್.ಎಮ್. ನೆಟ್ ವರ್ಕ್ ಬದಲು ಜಿಯೊ ಧ್ವನಿ ಕರೆಗಳನ್ನು ಸಕ್ರಿಯಗೊಳಿಸಲು 4 ಜಿ ಡೇಟಾವನ್ನು ಬಳಸುತ್ತದೆ. ಇದರಿಂದಾಗಿ ಜಿಯೋ ತನ್ನ ಬಳಕೆದಾರರಿಗೆ ಅನಿಯಮಿತ ಉಚಿತ ಕರೆಗಳನ್ನು ನೀಡಬಹುದು. ಜಿಯೊದಿಂದ ಬಂದ ಸವಾಲನ್ನು ಎದುರಿಸಲು ಏರ್ ಟೆಲ್ ಮತ್ತು ಇತರ ಟೆಲಿಕಾಂ ಕಂಪನಿಗಳು ಡೇಟಾ, ಕರೆ ಸೌಲಭ್ಯವನ್ನು ಹೆಚ್ಚು ಮಾಡಿವೆ.

VoLTE ಅನ್ನು ಬಳಸಲು ಫೋನ್ ನಲ್ಲಿ ಕೆಲವು ನಿರ್ದಿಷ್ಟ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಬೆಂಬಲ ಅಗತ್ಯವಿದೆ. ವಿಶೇಷವಾಗಿ ಜಿಯೋ ಬಂದ ನಂತರ ಭಾರತದಲ್ಲಿ ಪ್ರಾರಂಭವಾದ ಬಹುತೇಕ ಸ್ಮಾರ್ಟ್ ಫೋನ್ ಗಳು, VoLTE ಕರೆಗಳನ್ನು ಬೆಂಬಲಿಸುತ್ತವೆ, ಹಲವು ಹಳೆಯ ಫೋನ್ ಗಳು ಮತ್ತು ಫೀಚರ್ ಫೋನ್ ಗಳಲ್ಲಿ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ.

ಉಚಿತ ಕರೆ ಸೌಲಭ್ಯದೊಂದಿಗೆ ಫೀಚರ್ ಫೋನ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ಜಿಯೋ ಇತ್ತೀಚೆಗೆ ‘ಉಚಿತ’ JioPhone ಅನ್ನು ಪರಿಚಯಿಸಿದೆ.

ಜಿಯೋಫೋನ್ ಫೀಚರ್ ಫೋನ್ ಹೊರತಾಗಿಯೂ, ಸ್ಮಾರ್ಟ್ ಫೋನ್ ಲಕ್ಷಣಗಳನ್ನು ಹೊಂದಿದೆ. ಇದು VoLTE ಕರೆಗಳನ್ನು ಮಾಡಲು 4G ನೆಟ್ ವರ್ಕ್ ಬಳಸಿಕೊಳ್ಳುತ್ತದೆ.

ಈ ವರ್ಷದ ಅಂತ್ಯದ ವೇಳೆಗೆ, ಏರ್ ಟೆಲ್ ಸಹ ತನ್ನದೇ ಆದ 4 ಜಿ ಫೀಚರ್ ಫೋನ್ ಬಿಡುಗಡೆ ಮಾಡಲಿದೆ. ಇದು ಉಚಿತ ವೋಲ್ಟ್ ಕರೆಗಳನ್ನು ಬೆಂಬಲಿಸುತ್ತದೆ. ಇದಕ್ಕಾಗಿ ಏರ್ ಟೆಲ್ ಮೈಕ್ರೋಮ್ಯಾಕ್ಸ್ ಅಥವಾ ಇಂಟೆಕ್ಸ್ ನೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...