alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋಗೆ ಟಕ್ಕರ್ : ಈ ಕಂಪನಿ ನೀಡ್ತಿದೆ ಭರ್ಜರಿ ಆಫರ್

ಜಿಯೋ ಆರ್ಭಟಕ್ಕೆ ಟಕ್ಕರ್ ನೀಡಲು ಏರ್ಟೆಲ್ ಶತಪ್ರಯತ್ನ ನಡೆಸುತ್ತಿದೆ. ಈಗ ಗ್ರಾಹಕರಿಗೆ ಭರ್ಜರಿ ಆಫರ್ ಒಂದನ್ನು ನೀಡ್ತಿದೆ. ಭಾರತದ ಕೆಲ ಪ್ರದೇಶದ ಗ್ರಾಹಕರು ಇದ್ರ ಲಾಭ ಪಡೆಯಲಿದ್ದಾರೆ. ಈ ಪ್ಲಾನ್ ಬೆಲೆ 597 ರೂಪಾಯಿ.

ಈ ಪ್ಲಾನ್ ವಿಶೇಷ ಇದ್ರ ಸಿಂಧುತ್ವ. ಈ ಯೋಜನೆ 168 ದಿನ ಮಾನ್ಯವಾಗಲಿದೆ. ಅನಿಯಮಿತ ಕರೆ ಜೊತೆಗೆ ಡೇಟಾ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ. ಯಾವುದೇ ಮಿತಿಯಿಲ್ಲದೆ ಗ್ರಾಹಕರು 168 ದಿನಗಳ ವರೆಗೆ ಅನಿಯಮಿತ ಕರೆ ಲಾಭ ಪಡೆಯಬಹುದಾಗಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ 10 ಜಿಬಿ ಡೇಟಾ ಸಿಗಲಿದೆ.

597 ರೂಪಾಯಿ ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿ ದಿನ 100 ಎಸ್ ಎಂ ಎಸ್ ಸಿಗಲಿದೆ. ಜಿಯೋದ ದೀರ್ಘಾವಧಿ ಯೋಜನೆಗೆ ಟಕ್ಕರ್ ನೀಡುವ ಉದ್ದೇಶದಿಂದ ಏರ್ಟೆಲ್ ಈ ಪ್ಲಾನ್ ಶುರು ಮಾಡಿದೆ. ಈ ಪ್ಲಾನ್ ನಲ್ಲಿ ಹೆಚ್ಚಿನ ಡೇಟಾ ಸಿಗ್ತಿಲ್ಲ. ಡೇಟಾ ಬಳಕೆಗಿಂತ ಹೆಚ್ಚು ಕರೆ ಮಾಡುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಏರ್ಟೆಲ್ ಈ ಪ್ಲಾನ್ ಶುರು ಮಾಡಿದೆ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...