alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಂಪನಿಯ 499 ರೂ. ಪ್ಲಾನ್ ನಲ್ಲಿ ಗ್ರಾಹಕರಿಗೆ ಸಿಗಲಿದೆ 75 ಜಿಬಿ ಡೇಟಾ

ಏರ್ಟೆಲ್ ತನ್ನ 499 ರೂ.ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ ಭಾರೀ ಬದಲಾವಣೆ ಮಾಡಿದೆ. ಹೊಸ ಬದಲಾವಣೆ ಪ್ರಕಾರ ಗ್ರಾಹಕರಿಗೆ ಶೇಕಡಾ 87.5ರಷ್ಟು ಹೆಚ್ಚುವರಿ ಡೇಟಾ ಸಿಗಲಿದೆ. ಮೈ ಇನ್ಫಿನಿಟಿ ಪ್ಲಾನ್ ನಲ್ಲಿ ಬರುವ 499  ರೂ. ಯೋಜನೆ ಅತಿ ಹೆಚ್ಚು ಮಾರಾಟದ ಪೋಸ್ಟ್ ಪೇಯ್ಡ್ ಪ್ಲಾನ್ ಆಗಿದೆ.

ಏರ್ಟೆಲ್ ತನ್ನ 399 ,649, 799 ಹಾಗೂ 1199 ರೂಪಾಯಿ ಪ್ಲಾನ್ ನಲ್ಲಿಯೂ ಆಫರ್ ನೀಡ್ತಿದೆ. ಏರ್ಟೆಲ್ ನ 499 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ 75 ಜಿಬಿ ಡೇಟಾ ಸಿಗಲಿದೆ. ಇದಕ್ಕಿಂತ ಮೊದಲು ಗ್ರಾಹಕರಿಗೆ 40 ಜಿಬಿ 3ಜಿ ಹಾಗೂ 4ಜಿ ಡೇಟಾ ಸಿಗ್ತಾಯಿತ್ತು.

499 ರೂಪಾಯಿ ಪ್ಲಾನ್ ನಲ್ಲಿ ಡೇಟಾ ಜೊತೆ ಪ್ರತಿ ದಿನ 100 ಎಸ್ ಎಂಎಸ್, ಅನಿಯಮಿತ ಕರೆ ಹಾಗೂ ರೋಮಿಂಗ್ ಸಿಗಲಿದೆ. ಇದ್ರ ಜೊತೆಗೆ ಒಂದು ವರ್ಷಗಳ ಕಾಲ ಗ್ರಾಹಕರಿಗೆ ಅಮೆಜಾನ್ ಪ್ರೈಂ ಚಂದಾದಾರತ್ವ ಸಿಗಲಿದೆ. ವಿಂಕ್ ಟಿವಿ ಸಬ್ಸ್ಕ್ರಿಪ್ಷನ್ ಜೊತೆ ಲೈವ್ ಟಿವಿ ಸೌಲಭ್ಯ ಕೂಡ ಸಿಗಲಿದೆ.

ಏರ್ಟೆಲ್ ಪ್ಲಾನ್ ಗೆ ಟಕ್ಕರ್ ನೀಡಲು ವೋಡಾಫೋನ್ ಕೂಡ 399 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ. ಅನಿಯಮಿತ ಕರೆ ಜೊತೆ ಹೆಚ್ಚುವರಿ ಡೇಟಾ ನೀಡುವುದಾಗಿ ಕಂಪನಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...