alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋಗೆ ಸೆಡ್ಡು ಹೊಡೆಯಲು ಏರ್ಟೆಲ್ ನಿಂದ ಬಂಪರ್ ಪ್ಲಾನ್

ರಿಲಯನ್ಸ್ ಜಿಯೋ ಮಾರುಕಟ್ಟೆಗೆ ಬಂದಾಗಿನಿಂದ ನೆಟ್ ವರ್ಕ್ ಸಂಸ್ಥೆಗಳು ಜಿದ್ದಿಗೆ ಬಿದ್ದಂತೆ ದರ ಸಮರ ನಡೆಸುತ್ತಿವೆ. ಇದೀಗ ಏರ್ ಟೆಲ್ ಇದಕ್ಕೆ ಇನ್ನೊಂದು ಹೊಸ ಪ್ಲಾನ್ ಒಂದನ್ನು ಸೇರಿಸಿದೆ.

ಏರ್ ಟೆಲ್ ಬಿಡುಗಡೆಗೊಳಿಸಿರುವ 398 ರೂ. ಪ್ರೀಪೇಯ್ಡ್ ಆಫರ್, ಜಿಯೋಗಿಂತ ಕಡಿಮೆ ದರಕ್ಕೆ ಹೆಚ್ಚು ಇಂಟರ್‌ನೆಟ್‌ ಸೇವೆ ಒದಗಿಸುತ್ತದೆ. ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡರೆ ಪ್ರತಿನಿತ್ಯ 1.5 ಜಿಬಿ ಇಂಟರ್ ನೆಟ್ ನೊಂದಿಗೆ ಅನ್ ಲಿಮಿಟೆಡ್ ವಾಯ್ಸ್ ಕಾಲ್ ಹಾಗೂ ಮೆಸೇಜ್ ಸಿಗಲಿದೆ.

70 ದಿನದ ಈ ಪ್ಯಾಕ್ ನಲ್ಲಿ ಗ್ರಾಹಕರಿಗೆ ಒಟ್ಟು 105 ಜಿಬಿ ಇಂಟರ್ ನೆಟ್ ನೀಡಲಿದೆ. ಜಿಯೋ ನೀಡುವ 398, 349 ಆಫರ್ ಗಳನ್ನು ಸೆಡ್ಡು ಹೊಡೆಯಲು ಈ ಆಫರ್ ಗಳನ್ನು ಏರ್ ಟೆಲ್ ಪರಿಚಯಿಸಿದೆ ಎನ್ನಲಾಗಿದೆ.

ಆದರೆ ವೊಡಾ ಫೋನ್ ಮಾತ್ರ ಈಗಲೂ ತನ್ನ ಗ್ರಾಹಕರಿಗೆ ದಿನಕ್ಕೆ 250 ನಿಮಿಷ ಉಚಿತ ಕರೆ ಸೌಲಭ್ಯವನ್ನು ನೀಡುತ್ತಿದೆ. ಆದರೆ ಏರ್ ಟೆಲ್ ಈ ಎಲ್ಲ ಕಟ್ಟಲೆಗಳನ್ನು ಮೀರಿ ಗ್ರಾಹಕರನ್ನು ಸೆಳೆಯಲು ಸಂಪೂರ್ಣ ಅನ್ ಲಿಮಿಟೆಡ್ ಆಫರ್ ನೀಡುತ್ತಿದೆ ಎಂದು ಹೇಳಲಾಗಿದೆ.

ಈ ಹಿಂದೆ ಏರ್ ಟೆಲ್ ಈಶಾನ್ಯ ರಾಜ್ಯಗಳ ಭಾಗದ ವೃತ್ತಗಳಿಗೆ ಸೀಮಿತವಾಗುವಂತೆ ಇದೇ ಮಾದರಿಯಲ್ಲಿ 399 ರೂ. ಗೆ ಪ್ಲಾನ್ ನೀಡಿತ್ತು. ಆದರೆ ಇದೀಗ 398 ಪ್ಲಾನ್ ನ್ನು ದೇಶದ ಎಲ್ಲೆಡೆ ಬಳಸಿಕೊಳ್ಳಬಹುದಾಗಿದೆ. ದೇಶದ 22 ವೃತ್ತಗಳಿಗೆ ಅನ್ವಯವಾಗುವಂತೆ ಈ ಆಫರ್ ಸಿದ್ಧಪಡಿಸಲಾಗಿದೆ ಎಂದು ಏರ್ ಟೆಲ್ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...