alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ಟೆಲ್ ಹೊಸ ಪ್ಲಾನ್ ನಲ್ಲಿ ಸಿಗ್ತಿದೆ 35 ಜಿಬಿ ಡೇಟಾ

ಏರ್ಟೆಲ್ ಹೊಸ ಪ್ರೀಪೇಯ್ಡ್ ಪ್ಲಾನ್ ಶುರು ಮಾಡಿದೆ. ಇದ್ರ ರಿಚಾರ್ಜ್ ಬೆಲೆ 195 ರೂಪಾಯಿ.ಈ ಹೊಸ ಪ್ಲಾನ್ ನಲ್ಲಿ ಗ್ರಾಹಕರಿಗೆ 1.25 ಜಿಬಿ 2ಜಿ/3ಜಿ/4ಜಿ ಡೇಟಾ ಪ್ರತಿದಿನ ಸಿಗಲಿದೆ. ಅನಿಯಮಿತ ವಾಯ್ಸ್ ಕಾಲಿಂಗ್ ಸೌಲಭ್ಯವನ್ನೂ ಏರ್ಟೆಲ್ ಗ್ರಾಹಕರಿಗೆ ನೀಡ್ತಿದೆ. ಈ ಪ್ಲಾನ್ 28 ದಿನಗಳ ಸಿಂಧುತ್ವ ಹೊಂದಿರಲಿದ್ದು, ಒಟ್ಟು 35 ಜಿಬಿ ಡೇಟಾ ಗ್ರಾಹಕರಿಗೆ ಸಿಗಲಿದೆ.

ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಎಸ್ಎಂಎಸ್ ಉಚಿತವಾಗಿ ಸಿಗ್ತಿಲ್ಲ. ಕೆಲವೇ ವಲಯದ ಜನರಿಗೆ ಮಾತ್ರ ಈ ಪ್ಲಾನ್ ಸಿಗಲಿದೆ. ವರದಿ ಪ್ರಕಾರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದ ಗ್ರಾಹಕರಿಗೆ 195 ಪ್ಲಾನ್ ಲಭ್ಯವಾಗಲಿದೆ. ದೇಶದಾದ್ಯಂತ ಈ ಪ್ಲಾನ್ ಜಾರಿಗೆ ತರಲಿದ್ಯಾ ಎನ್ನುವ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಇದಕ್ಕೂ ಮುನ್ನ ಹಿಂದಿನ ವಾರ ಏರ್ಟೆಲ್ 168 ರೂಪಾಯಿ ಪ್ರೀಪೇಯ್ಡ್ ಪ್ಲಾನ್ ಶುರು ಮಾಡಿದೆ. ಇದು ದೆಹಲಿ, ತೆಲಂಗಾಣ, ಆಂಧ್ರಪ್ರದೇಶ ಗ್ರಾಹಕರಿಗೆ ಸಿಗ್ತಿದೆ. 168 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 1ಜಿಬಿ 2ಜಿ/3ಜಿ/4ಜಿ ಡೇಟಾ ಸಿಗ್ತಿದೆ. 100 ಎಸ್ಎಂಎಸ್ ಹಾಗೂ ಅನಿಯಮಿತ ಕರೆ ಸೌಲಭ್ಯವೂ ಸಿಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...