alex Certify
ಕನ್ನಡ ದುನಿಯಾ       Mobile App
       

Kannada Duniya

ಭರ್ಜರಿ ಆಫರ್: 349 ರೂ.ಗೆ ಡೈಲಿ 1.5 ಜಿ.ಬಿ. ಡೇಟಾ

ನವದೆಹಲಿ: ದೇಶದ ಪ್ರಮುಖ ಟೆಲಿಕಾಂ ಕಂಪನಿಯಾಗಿರುವ ಏರ್ ಟೆಲ್ ಮತ್ತೊಂದು ಪ್ಲಾನ್ ಪರಿಚಯಿಸಿದ್ದು, 349 ರೂ.ಗೆ ದಿನಕ್ಕೆ 1.5 ಜಿ.ಬಿ. ಡೇಟಾ ನೀಡ್ತಿದೆ.

ಜಿಯೊ ಬಂದ ಬಳಿಕ ಮೊಬೈಲ್ ಸೇವಾ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚಾಗಿದ್ದು, ಏರ್ ಟೆಲ್ ಕೆಲವು ದಿನಗಳ ಹಿಂದೆ 349 ರೂ. ಹೊಸ ಪ್ಲಾನ್ ಪರಿಚಯಿಸಿತ್ತು. ಈ ಪ್ಲಾನ್ ಅನ್ನು ಇನ್ನಷ್ಟು ಆಕರ್ಷಕವಾಗಿಸಿದ್ದು, ದಿನಕ್ಕೆ 1.5 ಜಿ.ಬಿ. ಡೇಟಾ ನೀಡಲಿದೆ.

349 ರೂ. ಪ್ಲಾನ್ ನಡಿ ದಿನಕ್ಕೆ 1 ಜಿ.ಬಿ. ಡೇಟಾ ಜೊತೆಗೆ ಅನಿಯಮಿತ ಕರೆ ಸೌಲಭ್ಯ ನೀಡಲಾಗಿತ್ತು. ಈಗ ದಿನ 1.5 ಜಿ.ಬಿ. ಡೇಟಾ, ಅನಿಯಮಿತ ಕರೆ ಹಾಗೂ 100 ಎಸ್.ಎಂ.ಎಸ್. ಸೌಲಭ್ಯ ಸಿಗಲಿದೆ. 28 ದಿನಗಳ ಅವಧಿಯ ಪ್ಲಾನ್ ಇದಾಗಿದೆ.

ದಿನಕ್ಕೆ 1 ಜಿ.ಬಿ.ಯಂತೆ 28 ಜಿ.ಬಿ. ಡೇಟಾ ಪಡೆಯುತ್ತಿದ್ದ ಗ್ರಾಹಕರಿಗೆ 42 ಜಿ.ಬಿ. ಡೇಟಾ ಸಿಗಲಿದೆ. 448 ರೂ. ಪ್ಲಾನ್ ನಲ್ಲಿ ಅನಿಯಮಿತ ಕರೆ ಸೌಲಭ್ಯ ಹಾಗೂ 70 ಜಿ.ಬಿ. ಡೇಟಾ ನೀಡಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...