alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋಗೆ ಟಕ್ಕರ್: ಏರ್ಟೆಲ್ ಗ್ರಾಹಕರಿಗೆ ಬಂಪರ್ ಆಫರ್

ಏರ್ಟೆಲ್ ಹಾಗೂ ರಿಲಾಯನ್ಸ್ ಜಿಯೋ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಗ್ರಾಹಕರನ್ನು ಆಕರ್ಷಿಸಲು ಕಂಪನಿಗಳು ಇನ್ನಿಲ್ಲದ ಕಸರತ್ತು ಮಾಡ್ತಿವೆ. ಈ ಮಧ್ಯೆ ಏರ್ಟೆಲ್ ತನ್ನ 149 ರೂಪಾಯಿ ಯೋಜನೆಯನ್ನು ನವೀಕರಿಸಿದೆ. ಕೆಲ ಪ್ರಾಂತ್ಯದ ಪ್ರಿಪೇಡ್ ಗ್ರಾಹಕರು ಮಾತ್ರ ಇದ್ರ ಲಾಭ ಪಡೆಯಲಿದ್ದಾರೆ.

ವರದಿ ಪ್ರಕಾರ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಗ್ರಾಹಕರಿಗೆ ಈ ಸೇವೆ ಲಭ್ಯವಿದೆ. ನವೀಕೃತ ಯೋಜನೆ ಪ್ರಕಾರ,149 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ ಅನಿಯಮಿತ ಸ್ಥಳೀಯ ಹಾಗೂ ಎಸ್ ಟಿ ಡಿ ಕರೆ ಸಿಗಲಿದೆ. ಪ್ರತಿದಿನ ನೂರು ಎಸ್ ಎಂ ಎಸ್ ಉಚಿತವಾಗಿ ಸಿಗಲಿದೆ. ಈ ಪ್ಲಾನ್ ಮಾನ್ಯತೆ 28 ದಿನಗಳಿರಲಿದ್ದು, 1 ಜಿಬಿ ಡೇಟಾ ಮಾತ್ರ ಸಿಗಲಿದೆ.

ಈ ಹಿಂದೆ ಏರ್ಟೆಲ್ ಟು ಏರ್ಟೆಲ್ ಗೆ ಮಾತ್ರ ಅನಿಯಮಿತ ಕರೆ ಸೌಲಭ್ಯ ನೀಡಿತ್ತು. ಆದ್ರೀಗ ಎಲ್ಲ ನೆಟ್ವರ್ಕ್ ಗೆ ಅನಿಯಮಿತ ಕರೆ ಸಿಗಲಿದೆ. ಇದಲ್ಲದೆ ತನ್ನ 399 ಪ್ಲಾನ್ ನಲ್ಲಿಯೂ ಏರ್ಟೆಲ್ ಬದಲಾವಣೆ ಮಾಡಿದೆ. ಈ ಹಿಂದೆ 70 ದಿನಗಳಿದ್ದ ಮಾನ್ಯತೆ 84 ದಿನಕ್ಕೆ ಏರಿಕೆಯಾಗಿದ್ದು ಪ್ರತಿದಿನ 1ಜಿಬಿ 3ಜಿ/4ಜಿ ಡೇಟಾ ಸಿಗಲಿದೆ. ಅನಿಯಮಿತ ಸ್ಥಳೀಯ ಹಾಗೂ ಎಸ್ ಟಿ ಡಿ ಕರೆ ಜೊತೆ 100 ಎಸ್ ಎಂ ಎಸ್ ಸಿಗಲಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...