alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ಟೆಲ್ ನ ಬದಲಾದ 399 ಪ್ಲಾನ್ ನಲ್ಲಿ ಪ್ರತಿದಿನ ಸಿಗಲಿದೆ 2.5 ಜಿಬಿ ಡೇಟಾ

ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ನೀಡಲು ಏರ್ಟೆಲ್ ತನ್ನ ಯೋಜನೆಯಲ್ಲಿ ಭಾರೀ ಬದಲಾವಣೆ ಮಾಡಿದೆ. ಏರ್ಟೆಲ್ 399 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಲಾಗಿದೆ. ಈ ಪ್ಲಾನ್ ನಲ್ಲಿ ಪ್ರತಿ ದಿನ 1.4 ಜಿಬಿ ಡೇಟಾ ಸಿಗ್ತಿತ್ತು. ಇನ್ಮುಂದೆ 2.4 ಜಿಬಿ ಡೇಟಾ ಗ್ರಾಹಕರಿಗೆ ಲಭ್ಯವಾಗಲಿದೆ.

ಏರ್ಟೆಲ್ ನ 399 ಪ್ಲಾನ್ ಎರಡು ಸಿಂಧುತ್ವ ಹೊಂದಿರಲಿದೆ. ಕೆಲ ಗ್ರಾಹಕರಿಗೆ ಇದ್ರ ವ್ಯಾಲಿಡಿಟಿ 70 ದಿನವಾದ್ರೆ ಮತ್ತೆ ಕೆಲ ಗ್ರಾಹಕರಿಗೆ 84 ದಿನ ವ್ಯಾಲಿಡಿಟಿ ಸಿಗಲಿದೆ. ಯಾವ ಗ್ರಾಹಕರ ಪ್ಲಾನ್ ವ್ಯಾಲಿಡಿಟಿ 84 ದಿನವಿದ್ಯೂ ಆ ಗ್ರಾಹಕರಿಗೆ ಪ್ರತಿ ದಿನ 2.4 ಜಿಬಿ ಡೇಟಾ ಸಿಗಲಿದೆ.

ಜಿಯೋಗೆ ಟಕ್ಕರ್ ನೀಡಲು ಏರ್ಟೆಲ್ ಈ ಬದಲಾವಣೆ ಮಾಡಿದೆ. ಜಿಯೋ 399 ರೂಪಾಯಿ ಯೋಜನೆಯಲ್ಲಿ ಪ್ರತಿ ದಿನ ಗ್ರಾಹಕರಿಗೆ 1.5 ಜಿಬಿ ಡೇಟಾ ಸಿಗ್ತಿದೆ. ಇದ್ರ ಸಿಂಧುತ್ವ 84 ದಿನವಾಗಿದೆ. ಜಿಯೋದ 448 ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 2 ಜಿಬಿ ಡೇಟಾ ಸಿಗ್ತಿದೆ. ಅದ್ರ ಸಿಂಧುತ್ವ ಕೂಡ 84 ದಿನವಾಗಿದೆ. ಜಿಯೋದ 448 ಪ್ಲಾನ್ ಗೆ ಟಕ್ಕರ್ ನೀಡಲು ಏರ್ಟೆಲ್ ಈ ಬದಲಾವಣೆ ಮಾಡಿದೆ.

ಏರ್ಟೆಲ್ ನ 399 ಪ್ಲಾನ್ ನಲ್ಲಿ ಪ್ರತಿ ದಿನ 2.5 ಜಿಬಿ ಡೇಟಾ ಜೊತೆಗೆ ಅನಿಯಮಿತ ಕರೆ ಲಭ್ಯವಾಗಲಿದೆ. ಆದ್ರೆ ಕಂಪನಿ ಇದಕ್ಕೆ ಸಮಯ ನಿಗದಿಪಡಿಸಿದೆ. ಗ್ರಾಹಕರು ದಿನದಲ್ಲಿ 250 ನಿಮಿಷ ಮಾತ್ರ ಕರೆ ಮಾಡಬಹುದಾಗಿದೆ. ಒಂದು ವಾರಕ್ಕೆ 1000 ನಿಮಿಷ ಕರೆ ಮಾಡುವ ಅವಕಾಶ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...